ದೇಶ

ಆಸ್ಪತ್ರೆಯಲ್ಲಿದ್ದುಕೊಂಡೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುವ ಸುಷ್ಮಾ ಸ್ವರಾಜ್

jaya-tweetಭಾರತೀಯನೊಬ್ಬ ತನ್ನ ಊರಿಗೆ ತೆರಳಲು ವಿಮಾನಯಾನ ದರ ಉಳಿಸುವ ನಿಟ್ಟಿನಲ್ಲಿ 22 ಕಿಮೀ ದೂರದಲ್ಲಿದ್ದ ಕೋರ್ಟ್‍ಗೆ 2 ವರ್ಷದ ಅವಧಿಯಲ್ಲಿ ಸುಮಾರು 20 ಬಾರಿ ನಡೆದುಕೊಂಡೇ ಹೋಗಿದ್ದರ ಬಗ್ಗೆ ಇತ್ತೀಚಿಗೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿದ್ದರು. ಆ ವ್ಯಕ್ತಿ ಯಾವುದೇ ತೊಂದರೆಗಳಿಲ್ಲದೆ ಮಂಗಳವಾರದಂದು ಊರನ್ನು ಸೇರಿದ್ದಾರೆ ಎಂದು ಸುಷ್ಮಾ ಸ್ವರಾಜ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ದುಬೈನಲ್ಲಿ ವಾಸವಾಗಿದ್ದ ತಿರುಚಿರಪಳ್ಳಿ ಮೂಲದ ಸೆಲ್ವರಾಜ್ ಅವರು ಸಂಕಷ್ಟಕ್ಕೀಡಾಗಿರುವ ಬಗ್ಗೆ ನ.30ರಂದು ಸಚಿವೆ ಸುಷ್ಮಾ ಸ್ವರಾಜ್‍ಗೆ ಮಾಹಿತಿ ಸಿಕ್ಕಿದೆ. ತಕ್ಷಣ ಕಾರ್ಯತಪ್ತರರಾದ ಅವರು ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಆದೇಶ ನೀಡಿದ್ದರು. ಇದಾಗಿ ಒಂದು ವಾರದಲ್ಲೇ ರಾಯಭಾರ ಕಚೇರಿಯು ಸೆಲ್ವರಾಜ್ ಅವರನ್ನು ಸುರಕ್ಷಿತವಾಗಿ ಅವರ ಊರಿಗೆ ಕಳುಹಿಸಿಕೊಟ್ಟಿದೆ. ಈ ಬಗ್ಗೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‍ ಅವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಜನಮನ್ನಣೆ ಗಳಿಸಿದ್ದಾರೆ. ಸಹಾಯ ಕೋರಿ ಯಾರು ಟ್ವೀಟ್ ಮಾಡಿದರೂ ಕೂಡಲೇ ಸ್ಪಂದಿಸುವ ಮೂಲಕ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದಾರೆ.

 

Leave a Reply

comments

Related Articles

error: