ಪ್ರಮುಖ ಸುದ್ದಿ

ಮಕ್ಕಳ ಕಳ್ಳರ ವದಂತಿ ಹಿನ್ನೆಲೆ : ಸ್ತ್ರೀವೇಷಧರಿಸಿ ಬಂದ ಪುರುಷನಿಗೆ ಸಾರ್ವಜನಿಕರಂದ ಥಳಿತ

ರಾಜ್ಯ(ಚಾಮರಾಜನಗರ)ಮೇ.22:- ಚಾಮರಾಜನಗರ ಜಿಲ್ಲೆಗೂ ಮಕ್ಕಳ ಕಳ್ಳರ ವದಂತಿ ಹಬ್ಬಿದ್ದು,ಮಕ್ಕಳ ಕಳ್ಳನೆಂದು ಪರಿಭಾವಿಸಿ ಅಮಾಯಕನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

ಚಾಮರಾಜನಗರ ತಾಲೂಕಿನ ಅರಳೀಕಟ್ಟೆ ಗ್ರಾಮದಲ್ಲಿ ಕಳೆದ ರಾತ್ರಿ ಗ್ರಾಮಸ್ಥರು ವ್ಯಕ್ತಿಯೋರ್ವನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೋಲಿಸರು ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ. ಇತ್ತೀಚಿಗೆ ವಿವಿಧ ಭಾಗಗಳಲ್ಲಿ ಹಬ್ಬಿರುವ ಮಕ್ಕಳ ಕಳ್ಳರ ವದಂತಿ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು  ಭಯಭೀತರಾಗಿದ್ದಾರೆ.  ಪುರುಷರು ಮಹಿಳೆಯರ ವೇಷದಲ್ಲಿ ಬಂದು ಮಕ್ಕಳಿಗೆ ತಿಂಡಿ ತಿನಿಸುಗಳ ಆಮಿಷ ಒಡ್ಡಿ, ತದನಂತರ ಮಕ್ಕಳಿಗೆ ಜ್ಞಾನ ತಪ್ಪಿಸುವ ಹಾಗೇ ಮಾಡಿ, ಕಾರಿನೊಳಗೆ ಕೂರಿಸಿಕೊಂಡು ಹೋಗುತ್ತಾರೆ ಎಂದು ಗ್ರಾಮಸ್ಥರು ತಿಳಿದುಕೊಂಡಿದ್ದು, ಈ ರೀತಿ ಸುಳ್ಳು ವದಂತಿಯಿಂದ ಮಕ್ಕಳನ್ನು ಪೋಷಕರು ಹೊರಗಡೆಗೂ ಬಿಡುತ್ತಿಲ್ಲ.  ಸಾಮಾಜಿಕ ಜಾಲತಾಣದಲ್ಲೂ ಮಕ್ಕಳ ಕಳ್ಳರ ಪೋಸ್ಟರ್ ಹರಿದಾಡುತ್ತಿದೆ ಎನ್ನಲಾಗಿದೆ. ಇದನ್ನು ತಿಳಿದ ಗ್ರಾಮಸ್ಥರು ಸ್ತ್ರೀವೇಷ ಧರಿಸಿ ಬಂದ ವ್ಯಕ್ತಿಯೋರ್ವನಿಗೆ ಮಕ್ಕಳ ಕಳ್ಳನೆಂದೇ ಭಾವಿಸಿ ಥಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: