
ದೇಶ
ಈಗ ಜಿಯೋ ಡಿಜಿಟಲ್ ಲೈಫ್ 2ಜಿ ಮತ್ತು 3ಜಿ ಸ್ಮಾರ್ಟ್ಫೋನ್ಗಳಲ್ಲಿ
4ಜಿ ಮೊಬೈಲ್ ಫೋನ್ ಹೊಂದಿದ್ದವರಷ್ಟೇ ಇಲ್ಲಿಯವರೆಗೆ ಜಿಯೋ ಡಿಜಿಟಲ್ ಲೈಫ್ ಸೇವೆಯನ್ನು ಪಡೆಯುತ್ತಿದ್ದು, ಇದೀಗ ಜಿಯೋಫೈ 4ಜಿ ಪೋರ್ಟೇಬಲ್ ಧ್ವನಿ ಮತ್ತು ಡಾಟಾ ಡಿವೈಸ್ನೊಂದಿಗೆ, ಚಂದಾದಾರರು 3ಜಿ ಅಷ್ಟೇ ಅಲ್ಲ, 2ಜಿ ಸ್ಮಾರ್ಟ್ಫೋನ್ಗಳಲ್ಲೂ ಕೂಡ ಜಿಯೋದ ಅದ್ಭುತ ಜಗತ್ತಿನ ಅನುಭವ ಪಡೆಯಬಹುದಾಗಿದೆ.
ಜಿಯೋ ಫೈ, ಜಿಯೋನ 4ಜಿ ಪೋರ್ಟೇಬಲ್ ಧ್ವನಿ ಮತ್ತು ಡಾಟಾ ಡಿವೈಸ್ ಈಗ ಎಲ್ಲ ಬಹು ಬ್ರಾಂಡ್ ಮಳಿಗೆಗಳಾದ್ಯಂತ ಲಭ್ಯ ಇದೆ. ಬೇರೆ ಡಾಂಗಲ್ಗಳು ಮತ್ತು ಪೋರ್ಟೇಬಲ್ ಹಾಟ್ಸ್ಪಾಟ್ ಡಿವೈಸ್ಗಳಿಗಿಂತ ಭಿನ್ನವಾದ, ಪೋರ್ಟೇಬಲ್ ವೈಫೈ ಹಾಟ್ಸ್ಪಾಟ್, ಕೇವಲ ಡಾಟಾ ಸಂಪರ್ಕವನ್ನಷ್ಟೇ ನೀಡದೆ, ಧ್ವನಿ ಮತ್ತು ವೀಡಿಯೋ ಕರೆಗಳ ಸಹಿತ ಜಿಯೋ ಸೇವೆಗಳ ಸಂಪೂರ್ಣ ಗುಚ್ಛವನ್ನೇ ನೀಡುತ್ತದೆ. ಇದನ್ನು ಈ ಡಿವೈಸ್ ಮೂಲಕ ಅನುಭವ ಹೊಂದಬಹುದಾಗಿದೆ.
ಮುಖ್ಯವಾಗಿ, ಜಿಯೋಫೈ ಡಿವೈಸ್ಗಳು ಈಗ ಸಮೀಪದ ರಿಟೈಲ್ ಮಳಿಗೆಗಳಲ್ಲಿ ಲಭ್ಯ ಇವೆ. ಅವುಗಳನ್ನು ರಿಲಯನ್ಸ್ನ ಫ್ಯಾಶನ್ ಮತ್ತು ಲೈಫ್ಸ್ಟೈಲ್ ಸೇರಿ ವಿವಿಧ ಇ-ಕಾಮರ್ಸ್ ವೆಬ್ಸೈಟ್ಗಳಿಂದ ಆನ್ಲೈನ್ನಲ್ಲಿ ಖರೀದಿಸಬಹುದಾಗಿದೆ.