ಮೈಸೂರು

ಮದುವೆ ಫಲತಾಂಬೂಲಕ್ಕೆ ಮೀನು ಹಂಚಿಕೆ..!

ವಿವಾಹ ಸಂದರ್ಭದಲ್ಲಿ ಫಲತಂಬೂಲಕ್ಕೆ ಹಣ್ಣು, ತೆಂಗಿನಕಾಯಿ ನೀಡುವುದು ಸರ್ವೇ ಸಾಮಾನ್ಯ. ಇದರ ಬದಲಿಗೆ ಮೀನು ನೀಡಿದರೆ ಹೇಗಿರುತ್ತೆ ಯೋಚಿಸಿ.

ಇದೇನಿದು ಅಂತಿರಾ ..ಇಂತಹದೊಂದು ಸಾಮಾಜಿಕ ಕಳಕಳಿಯನ್ನು ನಗರದ ಸೋಮಶೇಖರ ಗೌಡ ಪ್ರದರ್ಶಿಸಲು ಉದ್ದೇಶಿಸಿದ್ದು ತಮ್ಮ ಮಗಳ ಮದುವೆಯಂಗವಾಗಿ. ಡಿ.8ರಂದು ಬೆಂಗಳೂರು ರಸ್ತೆಯ ಸಿದ್ದಲಿಂಗಪುರ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಿರುವ ಸುಖಾಸನ ಷೋ ರೂಮ್‍ನಲ್ಲಿ ಮದುವೆ ಫಲ ತಾಂಬೂಲದಲ್ಲಿ 5 ಹೆಣ್ಣು,5 ಗಂಡು ಗುಪ್ಪೆ ಮೀನುಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಕೆಲವೇ ದಿನಗಳಲ್ಲಿ ಮೀನುಗಳ ಸಂತಾನವು ದ್ವಿಗುಣಗೊಳ್ಳುವುದು ಅವುಗಳನ್ನೇ ಇನ್ನೊಬ್ಬರಿಗೆ ನೀಡಬಹುದು ಎಂದರು.

ಮೀನುಗಳನ್ನು ಮನೆಯಲ್ಲಿನ ಸಿಮೆಂಟಿನ ತೊಟ್ಟಿಯಲ್ಲಿ ಸಾಕುವುದರಿಂದ ಸೊಳ್ಳೆಗಳು ನಿರ್ಮೂಲನೆ ಹೊಂದುವವು. ಬಹುತೇಕ ಡೆಂಘೀ, ಚಿಕೂನ್‍ಗುನ್ಯ, ಮಲೇರಿಯಾ ಸೇರಿದಂತೆ ಭಯಾನಕ ಕಾಯಿಲೆ ಹರಡುವ ಸೊಳ್ಳೆಗಳು ಮೊಟ್ಟೆಯಿಡುವುದು. ಶುದ್ಧ ನೀರಿನಲ್ಲಿ ಅಂತಹ ಮೊಟ್ಟೆಗಳನ್ನು ಮೀನುಗಳು ನಾಶ ಮಾಡುವುದರಿಂದ ಸೊಳ್ಳೆ ಸಂತತಿ ಬೆಳೆಯುವುದಿಲ್ಲ. ಇದೊಂದು ಪರಿಣಾಮಕಾರಿ ಪ್ರಯೋಗವಾಗಿದ್ದು ಈಗಾಗಲೇ ದೇಶ ವಿದೇಶದಲ್ಲಿ ಪ್ರಸಿದ್ಧವಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಹಾಗೂ ಉರಗ ಪ್ರೇಮಿ ಸ್ನೇಕ್ ಶ್ಯಾಮ್ ಉಪಸ್ಥಿತರಿದ್ದರು.

 

 

Leave a Reply

comments

Related Articles

error: