
ದೇಶಪ್ರಮುಖ ಸುದ್ದಿ
24ಕೋ.ರೂ.ಮೌಲ್ಯದ ಹೆರಾಯಿನ್ ವಶ : ಮೂವರ ಬಂಧನ
ದೇಶ(ನವದೆಹಲಿ)ಮೇ.22:- ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ 24ಕೋಟಿರೂ.ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದು,ಮೂವರನ್ನು ಬಂಧಿಸಿದ್ದಾರೆ.
ವಶಪಡಿಸಿಕೊಳ್ಳಲಾದ 6ಕೆ.ಜಿ.ತೂಕದ ಹೆರಾಯಿನ್ ಗಳನ್ನು ಮ್ಯಾನ್ಮಾರ್ ಮತ್ತು ಮಣಿಪುರ ಮಾರ್ಗವಾಗಿ ದೆಹಲಿಯ ಎನ್ ಸಿಆರ್ ಗೆ ತರಲಾಗುತ್ತಿತ್ತು ಎನ್ನಲಾಗಿದೆ. ದೇಶದ ಪ್ರತಿರಾಜ್ಯಕ್ಕೂ ಹೆರಾಯಿನ್ ಸಪ್ಲೈ ಮಾಡುತ್ತಿರುವುದಾಗಿ ಬಂಧಿತರು ತಿಳಿಸಿದ್ದು, ಪ್ರಕರಣದಲ್ಲಿ ಯಾರು ಶಾಮೀಲಾಗಿದ್ದಾರೆಂಬ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ನಿಖರ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರಿಗೆ 6ಕೆ.ಜಿ.ಅಕ್ರಮವಾಗಿ ಸಾಗಿಸುತ್ತಿದ್ದ ಹೆರಾಯಿನ್ ಸಿಕ್ಕಿದೆ. ವಶಪಡಿಸಿಕೊಳ್ಳಲಾದ ಹೆರಾಯಿನ್ ಬೆಲೆ 24ಕೋ.ರೂ.ಎಂದು ಅಂದಾಜಿಸಲಾಗಿದ್ದು, ಬಂಧಿತರಲ್ಲಿ ಓರ್ವ ಅಸ್ಸಾಂ ನಿವಾಸಿಯಾಗಿದ್ದು, ಮತ್ತಿಬ್ಬರು ಮಣಿಪುರ ನಿವಾಸಿಗಳಾಗಿದ್ದಾರೆ. ಮೂವರು ಬೇರೆಯವರಿಂದ ಹೆರಾಯಿನ್ ಪಡೆದು ಮತ್ತೊಂದೆಡೆ ಸಪ್ಲೈ ಮಾಡುತ್ತಿದ್ದರು ಎನ್ನಲಾಗಿದೆ. (ಎಸ್.ಎಚ್)