ಕರ್ನಾಟಕಪ್ರಮುಖ ಸುದ್ದಿ

ರೈತರ ಸಾಲಮನ್ನಾ ಬಗ್ಗೆ ಉಲ್ಟಾ ಹೊಡೆದ್ರಾ ನಿಯೋಜಿತ ಸಿಎಂ ಹೆಚ್.ಡಿ ಕುಮಾರಸ್ವಾಮಿ?

ರಾಜ್ಯ(ಬೆಂಗಳೂರು)ಮೇ.22:- ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೇ  24 ಗಂಟೆಯೊಳಗೆ ಸಾಲಮನ್ನಾ ಮಾಡುತ್ತೇನೆ ಎಂದು ಚುನಾವಣೆಗೂ ಮುನ್ನ ಹೇಳಿಕೆ ನೀಡಿದ್ದ ನಿಯೋಜಿತ ಮುಖ್ಯಮಂತ್ರಿ  ಹೆಚ್.ಡಿ ಕುಮಾರಸ್ವಾಮಿ ಇದೀಗ ಜೆಡಿಎಸ್ ಗೆ ಸ್ವತಂತ್ರ ಸರ್ಕಾರ ಕೊಟ್ಟಿದ್ದರೆ  24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡಬಹುದಿತ್ತು ಎಂದು ರಾಗ ಎಳೆದಿದ್ದಾರೆ.

ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ  ಅವರು ಮೊದಲೇ ಘೋಷಣೆ ಮಾಡಿದ್ದೆ. ಆದರೇ ರಾಜ್ಯದ ಜನರಿಗೆ ಸಾಲಮನ್ನಾ ಮಾಡಲು ಇಷ್ಟವಿಲ್ಲ ಎಂದು ಕಾಣುತ್ತೆ. ಅದಕ್ಕಾಗಿ ಜೆಡಿಎಸ್ ನ್ನು ರಾಜ್ಯದ  ಜನ ತಿರಸ್ಕರಿಸಿದ್ದಾರೆ. ಈ ಕುರಿತು ವಿರೋಧ ಪಕ್ಷಗಳು ಆಡಿಕೊಳ್ತಿದ್ದಾರೆ.  ಮೈತ್ರಿ ಸರ್ಕಾರದಲ್ಲಿ ಸಂಪೂರ್ಣ ಅಧಿಕಾರವಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಜತೆ ಚರ್ಚಿಸಿ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು. ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಂಪೂರ್ಣ ಅಧಿಕಾರ ಕೊಡದಿದ್ದರೂ ನನ್ನ ರೈತ ಉಳಿಯುವುದಕ್ಕಾಗಿ ರೈತರ ಪರ ಯೋಜನೆಗಳನ್ನು ಮಾಡುತ್ತೇನೆ. ಒಂದು ವೇಳೆ ನಮ್ಮ ಪಕ್ಷಕ್ಕೆ ಬಹುಮತ ಬಂದಿದ್ದರೆ ಹಲವು ಯೋಜನೆಗಳನ್ನು ಮಾಡುತ್ತಿದ್ದೆ ಎಂದರು.

ಸಂಪುಟ ರಚನೆ ಕುರಿತು ಪ್ರತಿಕ್ರಿಯಿಸಿದ ಅವರು  ಮಂತ್ರಿ ಮಂಡಲದ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ಯಾರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಬಗ್ಗೆಯೂ ಮಾತುಕತೆಯಾಗಿಲ್ಲ. ವಿಧಾನಸಭಾ ಸಭಾಧ್ಯಕ್ಷರ ಬಗ್ಗೆಯೂ ಯಾವುದೇ ಗೊಂದಲವಿಲ್ಲ. 5 ವರ್ಷದ ಸುಭದ್ರ ಸರ್ಕಾರ ನಡೆಸಬೇಕೆಂಬುದು ನಮ್ಮ ಇಚ್ಛೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೂ ಇದನ್ನೇ ಹೇಳಿದ್ದಾರೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: