ದೇಶಪ್ರಮುಖ ಸುದ್ದಿ

ಪ್ರಧಾನಿ ಮೋದಿ ಅವರಿಂದ ಜಯಲಲಿತಾ ಅವರಿಗೆ ಭಾವಪೂರ್ಣ ನಮನ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೆನ್ನೈಯಲ್ಲಿರುವ ರಾಜಾಜಿ ಹಾಲ್‍ಗೆ ಭೇಟಿ ನೀಡಿ ಜೆ. ಜಯಲಲಿತಾ ಅವರಿಗೆ ಭಾವಪೂರ್ಣ ನಮನ ಸಲ್ಲಿಸಿದರು. ಸಿ.ಎಂ. ಪನ್ನೀರ್ ಸೆಲ್ವಂ ಮತ್ತು ಜಯಾ ಆಪ್ತೆ ಶಶಿಕಲಾರಿಗೆ ಮೋದಿ ಅವರು ಸಾಂತ್ವನ ಹೇಳಿದರು.

ಜಯಲಲಿತಾ ವಿಧವಶರಾದ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಚೆನ್ನೈಗೆ ಆಗಮಿಸಿದ್ದರು.

ಬಹುಭಾಷಾ ನಟ ರಜನಿಕಾಂತ್ ಕುಟುಂಬ ಸಮೇತರಾಗಿ ಆಗಮಿಸಿ ಜಯಲಲಿತಾರ ಅಂತಿಮ ದರ್ಶನ ಪಡೆದರು. ನಟ ಕಮಲ ಹಾಸನ್, ಪ್ರಭುದೇವ, ಸೂರ್ಯ, ವಿಜಯ್,  ನಾಸಿರ್, ಗೌತಮಿ, ಸುಹಾಸಿನಿ, ಮಣಿರತ್ನಂ ಖುಷ್ಬೂ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.

rajanikanth

Leave a Reply

comments

Related Articles

error: