ಪ್ರಮುಖ ಸುದ್ದಿ

ವಿವಿ ಪ್ಯಾಟ್ ಖಾಲಿ ಬಾಕ್ಸ್ ಪತ್ತೆ ಪ್ರಕರಣ, ಮೂವರ ಬಂಧನ : ಪೊಲೀಸರು ಗುಜರಾತಿಗೆ

ರಾಜ್ಯ(ವಿಜಯಪುರ)ಮೇ.23:- ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಬಳಿ ವಿವಿಪ್ಯಾಟ್ ಖಾಲಿ ಬಾಕ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಬಂಧಿತರನ್ನು ವಿವಿಪ್ಯಾಟ್ ಸಿಕ್ಕ ಶೆಡ್ ಲೀಸ್ ಪಡೆದಿದ್ದ ನಿರ್ಮಾಣ ಕಂಪನಿಯ ಗುಜರಾತ್ ಮೂಲದ ಮ್ಯಾನೇಜರ್ ಚಿಮನಬಾಯಿ ಪಟೇಲ್, ಇಬ್ಬರು ಕಾರ್ಮಿಕರೆನ್ನಲಾದ ಬಿಹಾರ ಮೂಲದ ಹರೀಂದ್ರಬಾಯಿ ಸಾಹನಿ, ರಾಜೇಶ್ವರ್ ಪಾಸ್ವಾನ್ ಎಂದು ಗುರುತಿಸಲಾಗಿದೆ. ಮೇ.20ರಂದು 8ವಿವಿ ಪ್ಯಾಟ್ ಖಾಲಿ ಬಾಕ್ಸ್ ಪತ್ತೆಯಾಗಿದ್ದು, ಡಿವೈಎಸ್ಪಿ ಅಶೋಕ್ ನೇತೃತ್ವದ ತಂಡ ತನಿಖೆ ನಡೆಸಿತ್ತು. ಈ ಮಧ್ಯೆ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗ ತಮಗೆ ಸಂಬಂಧಿಸಿದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಇದೀಗ ಇಂಥಹ ಬಾಕ್ಸ್ ಗಳನ್ನು ತಯಾರಿಸುವ ಕಂಪನಿಗಳ ವಿಚಾರಣೆಗಾಗಿ ಗುಜರಾತ್ ಗೆ ಪೊಲೀಸರ ತಂಡ ತೆರಳಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: