ಮೈಸೂರು

ಕೇರಳದಲ್ಲಿ ನಿಫಾ ವೈರಸ್ : ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿಯೂ ಮುನ್ನೆಚ್ಚರಿಕಾ ಕ್ರಮ

ಮೈಸೂರು,ಮೇ.23:- ಕೇರಳದಲ್ಲಿ ನಿಫಾ ವೈರಸ್ ಗೆ  ಹತ್ತು ಮಂದಿ ಸಾವನ್ನಪ್ಪಿದ್ದು, ಇದೊಂದು ಮಾರಕ  ವೈರಸ್  ಆಗಿರುವ ಕಾರಣ ವೈರಸ್ ತಡೆಗಟ್ಟುವ  ಉದ್ದೇಶದಿಂದ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ  ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ.

ಮೈಸೂರಿನಲ್ಲಿ ಇಲ್ಲಿಯವರೆಗೂ ನಿಫಾ ಸೋಂಕು  ಕಂಡು ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ನಗರದ ಕೆ ಆರ್ ಆಸ್ಪತ್ರೆಯಲ್ಲಿ ವಿಶೇಷವಾಗಿ 10 ಬೆಡ್ ಗಳನ್ನು ಸಿದ್ಧಪಡಿಸಲಾಗುವುದು  ಎಂದು ಕೆ ಆರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಚಂದ್ರಶೇಖರ್  ತಿಳಿಸಿದ್ದಾರೆ.  ಇನ್ನು  ಈ ವೈರಸ್ ಪ್ರಮುಖವಾಗಿ  ಬಾವಲಿಗಳ ಮತ್ತು ಹಂದಿಗಳ   ಮೂಲಕ ಹರಡುವ ವೈರಸ್ ಆಗಿದ್ದು ಹಂದಿ ಮತ್ತು ಬಾವಲಿಗಳ ಮೂಲಕ ಹರಡಲಿರುವ  ಕಾರಣ, ಹಂದಿ  ಸಾಕಣೆ  ಮಾಡುವವರು  ಎಚ್ಚರಿಕೆಯಿಂದಿರಬೇಕು ಮತ್ತು ಬಾವಲಿಗಳು ಕಚ್ಚಿ  ತಿನ್ನುವ  ಹಣ್ಣುಗಳನ್ನು ತಿನ್ನದಿರಲು  ಡಾ.ಚಂದ್ರಶೇಖರ್ ಕಿವಿಮಾತು ಹೇಳಿದರು. ಪುಣೆಯಲ್ಲಿರುವ ನ್ಯಾಷನಲ್ ಇನ್ಸಟಿಟ್ಯೂಟ್ ಆಫ್ ವೈರಾಲಜಿ ಹತ್ತುಮಂದಿ ಸಾವಿಗೆ ನಿಫಾ ವೈರಸ್ ಕಾರಣ ಎನ್ನುವುದನ್ನು ದೃಢಪಡಿಸಿರುವ ಕಾರಣ ಇಲ್ಲಿಯೂ  ಸಹ ಮುನ್ನೆಚ್ಚರಿಕೆ  ಕ್ರಮ ವಹಿಸಲಾಗಿದೆ  ಎಂದು ಅವರು ತಿಳಿಸಿದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: