ಮೈಸೂರು

ನಿಫಾ ವೈರಸ್ ಹಿನ್ನೆಲೆ : ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ಅಭಿರಾಮ್ ಜಿ.ಶಂಕರ್

ಮೈಸೂರು,ಮೇ.23:- ಕೇರಳದಲ್ಲಿ 10ಮಂದಿ ಸಾವಿಗೆ ಕಾರಣವಾಗಿದ್ದ ನಿಫಾ ವೈರಸ್ ರಾಜ್ಯಕ್ಕೂ ಹರಡುವ ಸಾಧ್ಯತೆಗಳಿದ್ದು, ಇದರ ವಿರುದ್ಧ ಸಮರ ಸಾರಲು ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಈ ಕುರಿತು  ನಿನ್ನೆ ಸುದ್ದಿಗೋಷ್ಠಿ ನಡೆಸಿದ  ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಕೇರಳದಲ್ಲಿ ನಿಫಾ ವೈರಸ್ ಗೆ 10ಮಂದಿ ಬಲಿಯಾಗಿದ್ದಾರೆ. ಕೇರಳದ ಗಡಿಭಾಗಗಳಾದ ಚಾಮರಾಜನಗರ,ಮೈಸೂರು,ಉಡುಪಿ, ಕೊಡಗು ಮತ್ತಿತರ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೇರಳದಿಂದ ಬರುವ ಪ್ರಯಾಣಿಕರ ಆರೋಗ್ಯದಲ್ಲಿ ವ್ಯತ್ಯಾಸವುಂಟಾದರೆ ಅವರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಆರ್.ಆಸ್ಪತ್ರೆ, ಚಲುವಾಂಬ ಆಸ್ಪತ್ರೆ, ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.

ನಿಫಾ ವೈರಸ್ ಲಕ್ಷಣಗಳು

ಜ್ವರ, ತಲೆನೋವು,ವಾಂತ, ತಲೆಸುತ್ತುವಿಕೆ,  ಅತಿಯಾದ ಜ್ವರ, ಮಿದುಳಿಗೆ ವ್ಯಾಪಿಸುವುದು, ಮಾತು ತೊದಲುವಿಕೆ, ಅಪಸ್ವರ, ಕೋಮಾ, ಉಸಿರಾಟದ ಸಮಸ್ಯೆ, ಕೆಮ್ಮು, ಮೈಕೈ ನೋವು

ಸೋಂಕು ಹರಡುವ ಬಗೆ

ಸೋಂಕಿತ ಬಾವಲಿ,ಹಂದಿಗಳು ಸ್ರವಿಸುವ ದ್ರವದ ಸಂಪರ್ಕ, ಸೋಂಕಿತ ಬಾವಲಿ, ಪ್ರಾಣಿಗಳು ಕಚ್ಚಿದ ಹಣ್ಣುಗಳ ಸೇವನೆಯಿಂದ, ಸೋಂಕು ಹೊಂದಿರುವ ವ್ಯಕ್ತಿಗಳೊಂದಿಗೆ ಸಂಪರ್ಕ

ಮುಂಜಾಗ್ರತಾ ಕ್ರಮ

ಸೋಂಕಿನ ಲಕ್ಷಣ ಕಂಡು ಬಂದರೆ ವೈದ್ಯರ ಸಲಹೆ ಪಡೆಯಿರಿ, ಬಾವಲಿ, ಪ್ರಾಣಿಗಳು ಕಚ್ಚಿದ ಮಳೆ-ಗಾಳಿಯಿಂದ ಬಿದ್ದ ಹಣ್ಣು ಸೇವಿಸಬಾರದು. ಬೀದಿ ಬದಿ ಕತ್ತರಿಸಿ ಮಾರುವ ಹಣ್ಣು ಸೇವಿಸಬಾರದು, ಕೈ ಶುಭ್ರಗೊಳಿಸಿ ಆಹಾರ ಸೇವಿಸಿ, ಬಾವಲಿಗಳು ಹೆಚ್ಚಿರುವ ಕಡೆ ಬಾವಿ ನೀರನ್ನು ಶುದ್ಧೀಕರಿಸಿ ಸೇವಿಸಿ. (ಎಸ್.ಎಚ್)

Leave a Reply

comments

Related Articles

error: