
ಮೈಸೂರು
ಬಾಬ್ರಿ ಮಸೀದಿ ಪುನರ್ ನಿರ್ಮಿಸಿ : ಎಸ್.ಡಿ.ಪಿ.ಐ ಒತ್ತಾಯ
ಬಾಬ್ರಿ ಮಸೀದಿ ಪುನರ್ ನಿರ್ಮಿಸಿ, ಜಾತ್ಯಾತೀತತೆ ಮರು ಸ್ಥಾಪಿಸಿ ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಮೈಸೂರಿನ ಅಶೋಕ ರಸ್ತೆಯಲ್ಲಿರುವ ಮಿಲಾದ್ ಪಾರ್ಕ್ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಬಾಬ್ರಿ ಮಸೀದಿಯ ಧ್ವಂಸ ಮಾಡಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವವರೆಗೂ ಈ ದೇಶದ ಜಾತ್ಯಾತೀತತೆಯ ಮರು ಸ್ಥಾಪನೆ ಸಾಧ್ಯವಿಲ್ಲ. ಬಾಬ್ರಿ ಮಸೀದಿಗೆ ನ್ಯಾಯ ಸಿಗುವವರೆಗೂ ಈ ದೇಶದ ಎಲ್ಲಾ ಜಾತ್ಯಾತೀತ ಜನತೆಯು ಹೋರಾಟವನ್ನು ಮುಂದುವರಿಸಲಿದ್ದಾರೆ. ಎಲ್ಲಾ ಭಾರತೀಯ ಪ್ರಜೆಗಳು ಬಾಬ್ರಿ ಮಸೀದಿಯ ಪುನರ್ ನಿರ್ಮಾಣಕ್ಕಾಗಿ ಪಟ್ಟು ಬಿಡದ ಹೋರಾಟವನ್ನು ಮುಂದುವರಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಯವರಿಗೆ ವಿಜ್ಞಾಪನಾ ಪತ್ರ ಸಲ್ಲಿಸಿದರು.