ಸುದ್ದಿ ಸಂಕ್ಷಿಪ್ತ

ವಿದ್ಯುತ್ ನಿಲುಗಡೆ

ಮೈಸೂರು, ಮೇ.23:-  ನಂಜನಗೂಡು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಏಗಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳನ್ನು  ಹಮ್ಮಿಕೊಳ್ಳಲಾಗಿದೆ.
ಮೇ 26 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಹುಲ್ಲಹಳ್ಳಿಯ ಶಿರಮಳ್ಳಿ, ಹೆಗ್ಗಡಹಳ್ಳಿ, ಹಗಿನವಾಳು, ರಾಂಪುರ, ಹುಲ್ಲಹಳ್ಲಿ, ನೆಲ್ಲಿತಾಳಪುರ, ಕುರಿಹುಂಡಿ, ಹರದನಹಳ್ಳಿ ಮತ್ತು ದುಗ್ಗಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು ಹಾಗೂ ನಂಜನಗೂಡಿನ ನಂಜನಗೂಡು ಪಟ್ಟಣ, ಕಲ್ಲಳ್ಳಿ ಕೈಗಾರಿಕಾ ಪ್ರದೇಶ ಮತ್ತು ದೇವೀರಮ್ಮನಹಳ್ಳಿ, ದೇವರಸನಹಳ್ಳಿ, ತಾಂಡವಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ನಂಜನಗೂಡು ವಿಭಾಗದ ಸೆಸ್ಕ್‍ನ  ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: