ಕರ್ನಾಟಕ

ಅಪರಿಚಿತರಿಗೆ ನವಜಾತ ಗಂಡು ಮಗು ಕೊಟ್ಟು ಮಹಿಳೆ ಪರಾರಿ

ಧಾರವಾಡ,ಮೇ.23: ಮಕ್ಕಳ ಕಳ್ಳತ್ತನ ಹೆಚ್ಚಾಗುತ್ತಿರುವ ವೇಳೆ ತಾಯಿ ತನ್ನ ಮಗುವನ್ನು ಕೊಟ್ಟು ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಹೇಳಿ ಅಪರಿತರಿಗೆ ಕೊಟ್ಟು ಕಾಣೆಯಾಗಿರುವ ಘಟನೆ ಧಾರವಾಡ ನಗರದ ಚರಂತಿಮಠ ಗಾರ್ಡನ್ ನ ಬನಶಂಕರಿ ಕಲ್ಯಾಣ ಮಂಟಪದ ಬಳಿ ನಡೆದಿದೆ.

ಧಾರವಾಡ ನಗರದ ಚರಂತಿಮಠ ಗಾರ್ಡನ್ ನ ಬನಶಂಕರಿ ಕಲ್ಯಾಣ ಮಂಟಪದ ಬಳಿ ಸೋಮವಾರ ರಾತ್ರಿ ಮಹಿಳೆಯೊಬ್ಬಳು ತನ್ನ ನವಜಾತ ಗಂಡು ಮಗುವನ್ನು ಅಲ್ಲೇ ಇದ್ದ ಇಬ್ಬರು ಮಹಿಳೆಯರ ಕೈಗೆ ಕೊಟ್ಟು ಹೋಗಿದ್ದಾಳೆ.

ಮಗು ಪಡೆದಿದ್ದ ಮಹಿಳೆಯರು ಶೌಚಾಲಯಕ್ಕೆ ಹೋಗುವುದಾಗಿ ಹೇಳಿದ್ದ ಈ ಮಹಿಳೆಯ ವಾಪಸ್ ಬರಲಿಲ್ಲ. ಕೊನೆಗೆ ಆ ಮಗುವನ್ನ ಶಹರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಮಗುವನ್ನ ಜಿಲ್ಲಾ ಆಸ್ಪತ್ರೆಯಲ್ಲಿ ಆರೈಕೆ ಮಾಡಿದ್ದು, ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ನೀಡಿದ್ದಾರೆ. ಸದ್ಯಕ್ಕೆ ಪೊಲೀಸರು ಕೂಡಾ ಮಗು ಕೊಟ್ಟು ಪರಾರಿಯಾಗಿದ್ದ ತಾಯಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. (ಪಿ.ಎಸ್ )

Leave a Reply

comments

Related Articles

error: