
ದೇಶ
ವಿಮಾನದಲ್ಲಿ ತಾಂತ್ರಿಕ ದೋಷ: ರಾಷ್ಟ್ರಪತಿಗಳ ಪ್ರಯಾಣ ಮೊಟಕು
ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿದ ಹಿನ್ನೆಲೆಯಲ್ಲಿ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.
ಸೋಮವಾರ ತಡರಾತ್ರಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನರಾದ ಹಿನ್ನೆಲೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆಂದು ರಾಷ್ಟ್ರಪತಿಗಳು ದೆಹಲಿಯಿಂದ ಬೆನ್ಹೈಗೆ ಮಂಗಳವಾರ ಬೆಳಗ್ಗೆ ಪ್ರಯಾಣಿಸಲು ಸನ್ನದ್ಧರಾಗಿದ್ದರು. ಈ ಸಮಯದಲ್ಲಿ ವಿಮಾನದಲ್ಲಿ ಸಂಭವಿಸಿದ ಅವಘಡದಿಂದ ಪ್ರವಾಸವನ್ನು ಮೊಟಕುಗೊಳಿಸಿದ್ದರು. ನಂತರ ಮಧ್ಯಾಹ್ನದ ಮೇಲೆ ಪ್ರಯಾಣ ಬೆಳೆಸಿದರು.
ಕೇರಳದಲ್ಲಿ ಶೋಕಾಚರಣೆ: ನೆರೆಯ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನಕ್ಕೆ ಕೇರಳ ಸರ್ಕಾರ ಇಂದು ಸಾರ್ವತ್ರಿಕ ರಜೆ ಮತ್ತು ಶೋಕಾಚರಣೆಯನ್ನು ಘೋಷಿಸಿದೆ.
ರಾಜ್ಯದಲ್ಲೂ ಶೋಕಾಚರಣೆಯಿದ್ದು ಇಂದು ನಡೆಯಬೇಕಿದ್ದ ಸರ್ಕಾರಿ ಮಟ್ಟದ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ.