ಮೈಸೂರು

ಮೇ.25ರಿಂದ ‘ಡಿಜಿ ಇಮೇಜ್ ನಮ್ಮ ಇಮೇಜ್’ ಅಂತರಾಷ್ಟ್ರೀಯ ವಸ್ತು ಪ್ರದರ್ಶನ

ಮೈಸೂರು,ಮೇ.23 : ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ (ಕೆಪಿಎ) ವತಿಯಿಂದ ಬೆಂಗಳೂರಿನಲ್ಲಿ ‘ಡಿಜಿ ಇಮೇಜ್ ‘ನಮ್ಮ ಇಮೇಜ್’ ಶೀರ್ಷಿಕೆಯಡಿ ಮೇ.25ರಿಂದ ಮೂರು ದಿನಗಳ ಕಾಲ  6ನೇ ಅಂತರಾಷ್ಟ್ರೀಯ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು  ಮೈಸೂರು ಜಿಲ್ಲಾ ಛಾಯಾಗ್ರಾಹಕರ ಮತ್ತು ವೀಡಿಯೋಗ್ರಾಫರ್ ಸಂಘದ ಅಧ್ಯಕ್ಷ ಎಂ.ಎಸ್.ಮಂಜುನಾಥ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು –ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಛಾಯಾಗ್ರಾಹಕರಿಂದ, ಛಾಯಾಗ್ರಾಹಕರಿಗೋಸ್ಕರ ‘ಡಿಜಿ ಇಮೇಜ್’ ತಂತ್ರಜ್ಞಾನದ ಸಮೂಹವನ್ನು ಏರ್ಪಡಿಸಲಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ 150ಕ್ಕೂ ಹೆಚ್ಚು ಛಾಯಾಗ್ರಾಹಕರು/ವೀಡಿಯೋಗ್ರಾಫರ್ಸ್ ಭಾಗವಹಿಸುವರು ಎಂದು ತಿಳಿಸಿದರು.

ಮೂರು ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನದಲ್ಲಿ ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನಗಳ ಆವಿಷ್ಕಾರಗಳ ಬಗ್ಗೆ ಕಾರ್ಯಾಗಾರಗಳು ನಡೆಯಲಿದೆ. ಅಲ್ಲದೇ ವಿವಿಧ ಕ್ಯಾಮರಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಮುಖ ಕ್ಯಾಮರಾ ಮತ್ತು ಲೈಟಿಂಗ್ ಕಂಪನಿಗಳಿಂದ ಉಚಿತ ಸೇವೆ ಸೇರಿದಂತೆ ವ್ಯವಹಾರ, ಅಂತರ್ಜಾಲ ಮತ್ತು ಪರಿಜ್ಞಾನ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುವುದು ಎಂದರು.

ವಸ್ತು ಪ್ರದರ್ಶನದಲ್ಲಿ ಪಾಲ್ಗೊಳಿಚ್ಚಿಸುವ ಆಸಕ್ತರು ದೂ.ಸಂ.9448079651 ಅಥವಾ 9448222411 ಅನ್ನು ಸಂಪರ್ಕಿಸಬಹುದು.

ಸಂಘದ ಕಾರ್ಯದರ್ಶಿ ರಮೇಶ್ ಕುಮಾರ್, ಉಪಾಧ್ಯಕ್ಷ ಎಸ್.ಮಂಜುನಾಥ್, ಎಂ.ಎಸ್.ಶ್ರೀನಿವಾಸ್, ಅರುಣ್ ಕುಮಾರ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: