ಮನರಂಜನೆ

ಗಾಸಿಪ್ ಗೆ ಎಡೆಮಾಡಿಕೊಟ್ಟ ನೇಹಾ ಧೂಪಿಯಾ ಮದುವೆ

ಮುಂಬೈ,ಮೇ 23-ನಟಿ ನೇಹಾ ಧೂಪಿಯಾ ಸದ್ದಿಲ್ಲದೇ ನಟ ಅಂಗದ್ ಸಿಂಗ್ ಬೇಡಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೀಗೆ ಸದ್ದಿಲ್ಲದೇ ವಿವಾಹವಾಗಿದ್ದಕ್ಕೆ ಗಾಸಿಪ್ ಪ್ರಿಯರು ಈಗ ಏನೇನೋ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ.

ಮದುವೆಗೂ ಮುನ್ನವೇ ನೇಹಾ ಧೂಪಿಯಾ ಗರ್ಭಿಣಿ ಆಗಿದ್ದರು. ಹೀಗಾಗಿ ತರಾತುರಿಯಲ್ಲಿ ನೇಹಾ ಮದುವೆಯಾಗಿದ್ದಾರೆ ಎಂದು ಗಾಸಿಪ್ ಹಬ್ಬಿಸುತ್ತಿದ್ದಾರೆ. ಇದು ಧೂಪಿಯಾ ಮನೆಯವರ ಕಿವಿಗೂ ಬಿದ್ದಿದೆ. ಹೀಗಾಗಿ, ನೇಹಾ ಧೂಪಿಯಾ ತಂದೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮದುವೆಗೂ ಮುನ್ನವೇ ನೇಹಾ ಧೂಪಿಯಾ ಗರ್ಭಿಣಿ ಆಗಿದ್ದರು ಎಂಬುದು ಶುದ್ಧ ಸುಳ್ಳು ಸುದ್ದಿ. ಆ ತರಹ ಏನೂ ಇರಲಿಲ್ಲ. ಇದ್ದಕ್ಕಿದ್ದಂತೆ ಇಬ್ಬರೂ ಮದುವೆ ಆಗಿದ್ರಿಂದ, ಈ ತರಹ ಗಾಳಿಮಾತು ಕೇಳಿಬರುತ್ತಿದೆ ಅಷ್ಟೇ. ಕೆಲವರು ತಮಗೆ ಇಷ್ಟಬಂದಂತೆ ರೂಮರ್ಸ್ ಹಬ್ಬಿಸುತ್ತಿರುತ್ತಾರೆ ಎಂದು ದಿನಪತ್ರಿಕೆಯೊಂದಕ್ಕೆ ನೇಹಾ ಧೂಪಿಯಾ ತಂದೆ ಪ್ರದೀಪ್ ಧೂಪಿಯಾ ಸ್ಪಷ್ಟನೆ ನೀಡಿದ್ದಾರೆ.

ಮದುವೆ ದಿನಾಂಕ ನಿಗದಿ ಆದ್ಮೇಲೆ, ಮದುವೆ ತಯಾರಿ ಮಾಡಿಕೊಳ್ಳಲು ನಮಗೆ ಸಿಕ್ಕಿದ್ದು ಕೇವಲ ಎರಡು ದಿನ. ಯಾಕಂದ್ರೆ, ಅಂಗದ್ ಸಿಂಗ್ ಬೇಡಿ ಹಾಗೂ ನೇಹಾ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬಿಜಿಯಿದ್ದರು. ನೇಹಾ ಹಾಗೂ ಅಂಗದ್ ಸಿಂಗ್ ಬೇಡಿ ಒಳ್ಳೆಯ ಸ್ನೇಹಿತರು ಎಂಬ ವಿಷಯ ನಮಗೆ ಗೊತ್ತಿತ್ತು. ಅವರಾಗಿ ಅವರೇ ಮದುವೆ ಬಗ್ಗೆ ಮಾತನಾಡಲಿ ಅಂತ ನಾವು ಕಾಯ್ತಿದ್ವಿ. ಕಡೆಗೂ ಅವರು ಮದುವೆ ಬಗ್ಗೆ ತೀರ್ಮಾನ ಕೈಗೊಂಡರು. ನಾವೂ ಕೂಡ ಸಂತೋಷದಿಂದ ಒಪ್ಪಿಕೊಂಡ್ವಿ ಎಂದಿದ್ದಾರೆ.

ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆ ಆಗಿರುವುದಕ್ಕಾಗಿ ನಟಿ ನೇಹಾ ಧೂಪಿಯಾ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಅಂಗದ್ ಸಿಂಗ್ ಬೇಡಿಗೆ ನೇಹಾ ರಾಖಿ ಕಟ್ಟಬೇಕಿತ್ತು ಅಂತೆಲ್ಲ ನೆಟ್ಟಿಗರು ಹೀಯಾಳಿಸುತ್ತಿದ್ದಾರೆ. ಟ್ರೋಲಿಗರಿಗೆಲ್ಲ ಕೇರ್ ಮಾಡದೇ, ತಮ್ಮ ಮಾತಲ್ಲೇ ಬಿಸಿ ಮುಟ್ಟಿಸಿದ್ದಾರೆ ನಟಿ ನೇಹಾ ಧೂಪಿಯಾ. (ಎಂ.ಎನ್)

Leave a Reply

comments

Related Articles

error: