ಕ್ರೀಡೆ

ನಾಗದೇವರಿಗೆ ಪೂಜೆ ಸಲ್ಲಿಸಿದ ಕ್ರಿಕೆಟ್ ಕೋಚ್ ರವಿಶಾಸ್ತ್ರಿ

ರಾಜ್ಯ(ಉಡುಪಿ)ಮೇ.23:- ಕಳೆದ ಹತ್ತು ವರ್ಷಗಳಿಂದ ಕಾರ್ಕಳ ತಾಲೂಕಿನ ಕರ್ವಾಲಿಗೆ ಆಗಮಿಸಿ ನಾಗದೇವತೆಗೆ ಪೂಜೆ ಸಲ್ಲಿಸುತ್ತಿದ್ದ ಭಾರತೀಯ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಈ ಬಾರಿಯೂ ಆಗಮಿಸಿ ವಿಶೆಷ ಪೂಜೆ ಸಲ್ಲಿಸಿದ್ದಾರೆ.

ವಿವಾಹವಾಗಿ ಹಲವು ವರ್ಷಗಳೇ ಕಳೆದರೂ ಸಂತಾನಭಾಗ್ಯ ಪ್ರಾಪ್ತಿಯಾಗದ ಹಿನ್ನೆಲೆಯಲ್ಲಿ ಹಿರಿಯರಾರೋ ನಾಗದೇವತೆಗೆ ಪೂಜೆ ಸಲ್ಲಿಸುವಂತೆ ಸಲಹೆ ನೀಡಿದ್ದು, ಅದರಂತೆ ಪೂಜೆ ಸಲ್ಲಿಸಿದಾಗ ಹೆಣ್ಣು ಮಗುವಿನ ಜನನವಾಗಿದೆ. ಇದರಿಂದ ಪ್ರತಿವರ್ಷವೂ ಕರ್ವಾಲಿನ ವಿಷ್ಣುಮೂರ್ತಿ ಸನ್ನಿಧಿಯಲ್ಲಿರುವ ನಾಗದೇವರಿಗೆ ಕಳೆದ ಹತ್ತು ವರ್ಷಗಳಿಂದಲೂ ತಪ್ಪದೇ ಪೂಜೆ ಸಲ್ಲಿಸುತ್ತಿದ್ದಾರೆ. ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರತಿವರ್ಷ ದೇವರಿಗೆ ಧನ್ಯವಾದ ಹೇಳಲೆಂದು ನಾನಿಲ್ಲಿಗೆ ಬರುತ್ತೇನೆ. ತಂಡದ ತರಬೇತಿ ಆರಂಭವಾದ ಬಳಿಕ ಸಮಯ ಸಿಗುವುದೇ ಕಷ್ಟವಾಗಿದ್ದು, ದೇವರಿಗೆ ಧನ್ಯವಾದವನ್ನಷ್ಟೇ ಹೇಳಿದ್ದೇನೆ. ಆತ ಉಳಿದಿದ್ದನ್ನು ನಡೆಸಿಕೊಡುತ್ತಾನೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: