ಮೈಸೂರು

ಧರ್ಮದ ಹೆಸರಿನಲ್ಲಿ ವೈದಿಕಶಾಹಿಗಳಿಂದ ಭಯೋತ್ಪಾದನೆ : ಬಂಜಗೆರೆ ಪ್ರಕಾಶ್ ವಿಷಾದ

ಹಿಂದೂ ಎಂಬುದು ಧರ್ಮವಲ್ಲ ಅದು ಕೇವಲ ಪ್ರದೇಶ. ಆದರೆ  ಧರ್ಮದ ಹೆಸರಿನಲ್ಲಿ ವೈದಿಕಶಾಹಿಗಳು ಭಯೋತ್ಪಾದನೆಯನ್ನು ಮಾಡಲು ಹೊರಟಿವೆ ಎಂದು  ಚಿಂತಕ ಬಂಜಗೆರೆ ಜಯಪ್ರಕಾಶ್ ವಿಷಾದಿಸಿದರು.

ಮೈಸೂರಿನ ಪುರಭವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 60ನೇ ಪರಿನಿರ್ವಾಣ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಆಯೋಜಿಸಿದ್ದ ವೈದಿಕ ಪರಂಪರೆಯಲ್ಲಿ ಅಸಮಾನತೆಯ ಮೂಲ ನೆಲೆಗಳು ವಿಚಾರ ಸಂಕಿರಣವನ್ನು ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರುಡಾ.ಬಾಬಾ ಸಾಹೇಬ ಅಂಬೇಡ್ಕರ್ ತೋರಿಸಿದ ಪ್ರೀತಿ, ಮೈತ್ರಿ, ಕರುಣೆ ಹಾಗೂ ಉದಾರತೆಯ ಆಶಯಗಳನ್ನು ಅಳವಡಿಸಿಕೊಂಡು ಬಂದರೆ ಚರಿತ್ರೆಯಲ್ಲಿ ಯಾವ ಯುದ್ಧವೂ ಆಗುತ್ತಿರಲಿಲ್ಲ. ದುರಾದೃಷ್ಟ ಅವರ ಆದರ್ಶಗಳು ಪಾಲನೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಮಾಜ ಅಂಬೇಡ್ಕರ್ ಅವರ ಆಶಯಗಳನ್ನು ನೆನಪಿನಲ್ಲಿರಿಸಿಕೊಂಡು ಕೃತಜ್ಞತಾ ಪೂರ್ವಕವಾಗಿ ನಡೆದುಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಪ್ರೊ ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ವೈದಿಕ ಪರಂಪರೆಯಲ್ಲಿ ಅಸಮಾನತೆಯ ಮೂಲ ನೆಲೆಗಳು ವಿಷಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್‍ ಕೆರೆಗೋಡು, ದಸಂಸ ಜಿಲ್ಲಾ ಸಂಚಾಲಕ ಅಲಗೂಡು ಶಿವಕುಮಾರ್, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ  ಹೊಸೂರು ಕುಮಾರ್, ಜಿಲ್ಲಾ ಸಂಚಾಲಕ ಕುಮಾರ್ ಕರಡೀಪುರ, ಚೋರನಹಳ್ಳಿ ಶಿವಣ್ಣ  ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: