ದೇಶ

ಪ್ರಸಿದ್ಧ ಚಲನಚಿತ್ರ ಮತ್ತು ರಂಗಭೂಮಿ ನಟ ಡಾ.ಹೆಮೂ ಅಧಿಕಾರಿ ನಿಧನ

ದೇಶ(ಮುಂಬೈ)ಮೇ.23:- ಪ್ರಸಿದ್ಧ ಚಲನಚಿತ್ರ ಮತ್ತು ರಂಗಭೂಮಿ ನಟ ಡಾ.ಹೆಮೂ ಅಧಿಕಾರಿ ತಮ್ಮ 81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಮುಂಬೈನ ದಾದರ್ ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಂತ್ಯಕ್ರಿಯೆಗೆ ಸಂಬಂಧಿಸಿದ ಎಲ್ಲ ಕಾರ್ಯಗಳೂ ಪೂರ್ಣಗೊಂಡಿವೆ. ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಮರಾಠಿ ನಟಿ ಸೋನಾಲಿ ಕುಲಕರ್ಣಿ ಮೃತರ ನಿಧನಕ್ಕೆ ಟ್ವೀಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಲಗೇ ರಹೋ ಮುನ್ನಾಭಾಯಿ’ ಚಿತ್ರದಲ್ಲಿ ನಿವೃತ್ತ ಶಿಕ್ಷಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: