ಮೈಸೂರು

ಖಾಯಂ ಕುಲಪತಿ ನೇಮಕಕ್ಕೆ ಮೈವಿವಿ ಸಂಶೋಧಕರ ಸಂಘದ ಒತ್ತಾಯ

ಮೈಸೂರು,ಮೇ.23 : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಖಾಯಂ ಕುಲಪತಿಗಳನ್ನು ನೇಮಿಸದೇ ಇರುವುದರಿಂದ ಶೈಕ್ಷಣಿಕ ಬೆಳವಣಿಗೆಗೆ ಹಿನ್ನಡೆಯಾಗಿದ್ದು, ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘವು ದೂರಿದೆ.

ಶತಮಾನೋತ್ಸವ ಆಚರಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಒಂದು ವರ್ಷ ನಾಲ್ಕು ತಿಂಗಳು ಕಳೆದರು ಖಾಯಂ ಕುಲಪತಿಯನ್ನು ನೇಮಿಸದೇ ಇರುವುದು ನಾಚಿಕೆಗೇಡು, ಪ್ರಭಾರ ಕುಲಪತಿಗಳು ಸೂಕ್ತ ರೀತಿಯಲ್ಲಿ ಆಡಳಿತಾತ್ಮಕ ನಿರ್ದಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಖಾಯಂ ಕುಲಪತಿಗಳನ್ನು ನೇಮಿಸಿ ವಿವಿಯ ಘಟನೆಯನ್ನು ಎತ್ತಿ ಹಿಡಿಯಬೇಕೆಂದು ಕೋರಿದ್ದಾರೆ.

ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಲು ಸರ್ಕಾರ ಅವಕಾಶ ನೀಡಿದ್ದರು ಪ್ರಭಾರ ಕುಲಪತಿಗಳ ತಾತ್ಸಾರದಿಂದ ಇಂದಿಗೂ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಂಡಿಲ್ಲ,  ಅಲ್ಲದೇ  ಅಧಿಕಾರ ದುರುಪಯೋಗ ಪಡೆಸಿಕೊಳ್ಳುತ್ತಿದ್ದು ಕೂಡಲೇ ಅವರನ್ನು ವರ್ಗಾವಣೆಗೊಳಿಸಿ ಖಾಯಂ ಕುಲಪತಿಗಳನ್ನು ನೇಮಕ ಮಾಡಬೇಕೆಂದು ಸಂಘದ ಅಧ್ಯಕ್ಷ ಡಿ.ಮಹದೇವಸ್ವಾಮಿ ಒತ್ತಾಯಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: