
ಮೈಸೂರು
ವಿದ್ಯಾರ್ಥಿ ನಿಲಯಗಳಲ್ಲಿ ಸೋಲಾರ್ ಅಳವಡಿಕೆ
ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಸರ್ಕಾರಿ ಪದವಿಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನೂತನವಾಗಿ ಅಳವಡಿಸಲಾದ ಸೋಲಾರ್ ವಾಟರ್ ಹೀಟರ್ ನ್ನು ಮಂಗಳವಾರ ಮಾಲಿಕೆಯ ಮೇಯರ್ ಬಿ.ಎಲ್.ಭೈರಪ್ಪ ವಿದ್ಯಾರ್ಥಿಗಳ ಬಳಕೆಗೆ ಅನುವು ಮಾಡಿಕೊಟ್ಟರು.
ಈ ಸಂದರ್ಭ ಹೆಚ್ಚುವರಿ ಆಯುಕ್ತ ಎನ್. ರಾಜು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪಿ.ವಿ. ಮಂಜುನಾಥ್, ನಗರಪಾಲಿಕೆ ಸಹಾಯಕ ಅಭಿಯಂತರ ಎನ್.ಎಸ್. ಮಧುಕರ್, ಗುತ್ತಿಗೆದಾರ ಮುರಳಿ ಉಪಸ್ಥಿತರಿದ್ದರು.
ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಶೇ. 24.10 ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಡಿ ಬರುವ 18 ವಿದ್ಯಾರ್ಥಿ ನಿಲಯಗಳ 2984 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಿಸಿ ನೀರಿನ ಸೌಲಭ್ಯಕ್ಕಾಗಿ ತಲಾ 500 ಲೀ. ಸಾಮರ್ಥ್ಯದ 76 ಸೋಲಾರ್ ವಾಟರ್ ಹೀಟರ್ ಗಳನ್ನು ಅಳವಡಿಸಿ ನೀಡಲಾಗಿದೆ. ಪಾಲಿಕೆಯು 80 ಲಕ್ಷಗಳ ವೆಚ್ಚವನ್ನು ಭರಿಸುತ್ತಿದೆ.