ಪ್ರಮುಖ ಸುದ್ದಿ

ಆರ್ ಎಸ್ ಎಸ್ ಸಿದ್ಧಾಂತ ಆಕ್ಷೇಪಿಸಿದ್ದೇ ಪ್ರತಿಭಟನಾಕಾರರ ಹತ್ಯೆಗೆ ಕಾರಣ ರಾಹುಲ್ ಟ್ವೀಟ್

ದೇಶ(ನವದೆಹಲಿ)ಮೇ.23:- ತಮಿಳ್ನಾಡಿನ ತೂತುಕುಡಿಯಲ್ಲಿ ನಡೆದ ರೈತರ ಗೋಲಿಬಾರ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಮಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಸ್ಟೆರ್ಲೈಟ್ ವಿರೋಧಿ ರೈತರು ಹೋರಾಟ ನಡೆಸುತ್ತಿದ್ದರು. ಈ ಕುರಿತು ಆರ್ ಎಸ್ ಎಸ್ ಸಿದ್ಧಾಂತದ ಕುರಿತು ಆಕ್ಷೇಪಣೆ ಮಾಡಿದ್ದು, ಆರ್ ಎಸ್ ಎಸ್ ಪೊಲೀಸರ ಮೂಲಕ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿದೆ ಎಂದು ಆರೋಪಿಸಿದ್ದಾರೆ. ತಮಿಳರು ಆರ್ ಎಸ್ ಎಸ್ ಸಿದ್ಧಾಂತವನ್ನು ಒಪ್ಪದಿರುವುದಕ್ಕೆ ರೈತರ ಹತ್ಯೆ ಮಾಡಲಾಗಿದೆ. ಅವರು ತಮ್ಮ ಸಿದ್ಧಾಂತವನ್ನು ಹೇರಲು ಮುಂದಾಗಿದ್ದು, ಅದಕ್ಕಾಗಿ ಈ ಕೃತ್ಯ ನಡೆಸಿದ್ದಾರೆ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ತಮಿಳಿನಲ್ಲಿ ಕೂಡ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.  (ಎಸ್.ಎಚ್)

Leave a Reply

comments

Related Articles

error: