ಮೈಸೂರು

ಪ್ರೀತಿಸಿದ ಹುಡುಗನ ಆವಾಜ್ ಗೆ ಬೇಸತ್ತ ಯುವತಿ ನೇಣಿಗೆ ಶರಣು

ಮೈಸೂರು,ಮೇ.24:- ಪ್ರೀತಿಸಿದ ಹುಡುಗನ ಆವಾಜ್ ಗೆ ಬೇಸತ್ತ ಯುವತಿ ನೇಣಿಗೆ ಶರಣಾದ ಘಟನೆ ಮೈಸೂರು ಹೊರವಲಯದ ಬೆಳವಾಡಿಯಲ್ಲಿ ನಡೆದಿದೆ.

ಮೃತ ಯುವತಿಯನ್ನು ಧನ್ಯಾ (19) ಎಂದು ಗುರುತಿಸಲಾಗಿದ್ದು, ಮೇಟಗಳ್ಳಿ ನಿವಾಸಿ ಬೀನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಪ್ರಿಯಕರನನ್ನು ಮನೆಗೆ ಕರೆತರುವಂತೆ ಧನ್ಯಾ ಪೋಷಕರು ಒತ್ತಾಯ ಮಾಡಿದ್ದರು ಎನ್ನಲಾಗಿದೆ. ಮದುವೆ ಮಾತುಕತೆಗೆ ಮನೆಗೆ ಬರುವಂತೆ ಯುವತಿ ಬೀನ್ ಗೆ ಆಹ್ವಾನ ನೀಡಿದ್ದಳು. ಮನೆಗೆ ಬರಲು ಒಪ್ಪದ ಬೀನ್ ಜೊತೆಗೆ ಜಗಳವಾಡಿದ್ದಳು. ಧನ್ಯಾ ತಂದೆ ನಡೆಸುತ್ತಿದ್ದ ಅಂಗಡಿ ಮುಂದೆ ಬಂದು ಧನ್ಯಾಗೆ ಬೀನ್ ಆವಾಜ್ ಹಾಕಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಧನ್ಯಾ ನೇಣು  ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: