ಮೈಸೂರು

ಅಪ್ರಾಪ್ತ ಬಾಲಕಿಯ ಅಪಹರಣ : ದೂರು ದಾಖಲಾದರೂ ಪೊಲೀಸರಿಂದ ಕ್ರಮವಿಲ್ಲ; ಆರೋಪ

ಮೈಸೂರು,ಮೇ.24;- ಸಿನಿಮೀಯ ರೀತಿಯಲ್ಲಿ ಅಪ್ರಾಪ್ತ ಬಾಲಕಿಯೋರ್ವಳನ್ನು ಅಪಹರಣ ಮಾಡಿದ ಘಟನೆ ಮೈಸೂರು ತಾಲೂಕಿನ ಜೆಟ್ಟಿಹುಂಡಿಯಲ್ಲಿ ನಡೆದಿದೆ.

ಪ್ರಕಾಶ್ ಎಂಬ ಯುವಕ ತಮ್ಮ ಮಗಳನ್ನು ಅಪಹರಿಸಿದ್ದಾನೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದಾರೆ. ಬಾಲಕಿ ಹತ್ತನೇ ತರಗತಿ  ವ್ಯಾಸಂಗ ಮುಗಿಸಿ ಶಾಲೆಯಲ್ಲಿ ವರ್ಗಾವಣೆ ಪತ್ರ ತರಲು ಹೋಗಿದ್ದ ವೇಳೆ ಅಪಹರಣ ನಡೆಸಲಾಗಿದೆ. ನಾಲ್ವರು ಯುವಕರ ತಂಡದಿಂದ ಕೃತ್ಯ ನಡೆದಿದೆ ಎಂದು ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮೂರು ದಿನಗಳ ಹಿಂದೆ ಅಪಹರಣ ನಡೆದಿದ್ದು,ಬಾಲಕಿ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಕೇವಲ ಪ್ರಕರಣವನ್ನಷ್ಟೇ ದಾಖಲಿಸಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: