ಮನರಂಜನೆ

‘ನಿರ್ಮಾ’ ಹುಡುಗಿ ಸಿಕ್ಕಿ ಬಿಟ್ಟಳು ! ಹಾಸ್ಯ ಮಾಡಿದ ಜಾಲತಾಣಿಗರು

ದೇಶ(ಮುಂಬೈ)ಮೇ.24:- ಬಾಲಿವುಡ್ ನಟಿಮಣಿಯರಾದ ಕರೀನಾ ಕಪೂರ್, ಸೋನಂ ಕಪೂರ್, ಸ್ವರಾ ಭಾಸ್ಕರ್ ಮತ್ತು ಶಿಖಾ ತಲ್ಸಾನಿಯಾ ಅಭಿನಯದ ‘ವೀರೆ ದಿ ವೆಡ್ಡಿಂಗ್’ ಶೀಘ್ರದಲ್ಲಿಯೇ ತೆರೆ ಕಾಣಲಿದೆ.

ಚಿತ್ರದ ಪ್ರಮೋಶನ್ ಗಾಗಿ ಭಾರೀ ಸಿದ್ಧತೆಯನ್ನೂ ನಡೆಸಲಾಗಿದೆ. ಮುಂಬೈನ ಸನ್ & ಸೈಂಡ್ ಹೋಟೆಲ್ ನಲ್ಲಿ ಚಿತ್ರದ ಸಂಗೀತವನ್ನು ಬಿಡುಗಡೆಗೊಳಿಸಲಾಯಿತು.  ಈ ಸಮಾರಂಭದಲ್ಲಿ ಚಿತ್ರದ ನಾಲ್ವರು ನಟಿಯರೂ ಹಾಟ್ ಜೊತೆ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು. ಆದರೆ ಕರೀನಾ, ಸೋನಂ, ಶಿಖಾ ಹೊರತುಪಡಿಸಿ ಸ್ವರಾ ಭಾಸ್ಕರ್ ಧರಿಸಿದ ಬಿಳಿಯ ಚಿಕ್ಕ ಉಡುಗೆಯ ಮೇಲೆ ಹಲವರ ಕಣ್ಣು ಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಆಗುತ್ತಿದ್ದಂತೆ ವಾಶಿಂಗ್ ಪೌಡರ್ ‘ನಿರ್ಮಾ’ವನ್ನು ನೆನಪಿಸಿಕೊಂಡ ಜಾಲತಾಣಿಗರು  ‘ನಿರ್ಮಾ’ಗರ್ಲ್ ಎಂದು ಕರೆಯತೊಡಗಿದ್ದಾರಂತೆ. ಅಷ್ಟೇ ಅಲ್ಲದೇ ನಿರ್ಮಾ ಹುಡುಗಿ ಸಿಕ್ಕಿ ಬಿಟ್ಟಳು ಎಂದು ಹಾಸ್ಯ ಮಾಡಿದ್ದಾರಂತೆ. ‘ವೀರೆ ದಿ ವೆಡ್ಡಿಂಗ್’ಜೂ.1ರಂದು ತೆರೆ ಕಾಣಲಿದ್ದು, ಇದು ನಾಲ್ವರು ಸ್ನೇಹಿತರ ಕಥೆಯನ್ನೊಳಗೊಂಡಿದೆ.ಇವರ ಜೀವನದಲ್ಲಿ ಹಲವು ಸಮಸ್ಯೆಗಳು ಬರುತ್ತಿದ್ದು, ಒಬ್ಬರಿಗೊಬ್ಬರು ಸದಾ ಜೊತೆಯಾಗುತ್ತಾರೆ. ಚಿತ್ರದ ನಿರ್ಮಾಣ ಸೋನಂ ಕಪೂರ್ ಸಹೋದರಿ ರಿಯಾ ಕಪೂರ್ ಮತ್ತು ಏಕ್ತಾ ಕಪೂರ್ ದಾಗಿದ್ದು, ಚಿತ್ರದ ನಿರ್ದೇಶನವನ್ನು ಶಶಾಂಕ್ ಘೋಷ್ ಮಾಡಿದ್ದಾರೆ.

(ಎಸ್.ಎಚ್)

Leave a Reply

comments

Related Articles

error: