ಮನರಂಜನೆ

ಐಪಿಎಲ್ ಸಮಾರೋಪದಲ್ಲೂ ಹೆಜ್ಜೆ ಹಾಕಲಿದ್ದಾರೆ ಜಾಕ್ವೆಲಿನ್ ಫರ್ನಾಂಡಿಸ್

ಮುಂಬೈ,ಮೇ 24-11ನೇ ಆವೃತ್ತಿಯ ಐಪಿಎಲ್ ನ ಸಮಾರೋಪ ಸಮಾರಂಭ ಮೇ 27 ರಂದು ಮುಂಬೈ ನಲ್ಲಿ ನಡೆಯಲಿದೆ. ಈ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಲಿದ್ದಾರೆ.

ಐಪಿಎಲ್ ಉದ್ಘಾಟನಾ ಸಮಾರಂಭದಲ್ಲೂ ಜಾಕ್ವೆಲಿನ್ ಹೆಜ್ಜೆ ಹಾಕಿದ್ದರು. ಇದೀಗ ಸಮಾರೋಪ ಸಮಾರಂಭದಲ್ಲಿಯೂ ಡ್ಯಾನ್ಸ್ ಮಾಡುವ ಚಾನ್ಸ್ ಜಾಕ್ವೆಲಿನ್ ಗೆ ಸಿಕ್ಕಿದೆ.

ಉದ್ಘಾಟನೆ ಹಾಗೂ ಬೀಳ್ಕೊಡುಗೆ ಸಮಾರಂಭ ಎರಡರಲ್ಲಿಯೂ ಡ್ಯಾನ್ಸ್ ಪರ್ಫಾಮೆನ್ಸ್ ನೀಡುವ ಅವಕಾಶ ಗಿಟ್ಟಿಸಿಕೊಂಡಿರುವ ಏಕೈಕ ನಟಿ ಜಾಕ್ವೆಲಿನ್ ಫರ್ನಾಂಡಿಸ್. ಅದಕ್ಕೆ ಕಾರಣ ಅವರ ಎನರ್ಜಿ ಎನ್ನಲಾಗಿದೆ.

ಜೂಮೇ ಕಿ ರಾತ್… ಹಾಡು ಸೇರಿದಂತೆ ಇಲ್ಲಿಯವರೆಗೂ ಜಾಕ್ವೆಲಿನ್ ಕಿಸೆಯಲ್ಲಿ 19 ಹಿಟ್ ನಂಬರ್ ಗಳಿವೆ. ಆ ಎಲ್ಲ ಹಾಡುಗಳ ಫ್ಯೂಶನ್ ಗೆ ಜಾಕ್ವೆಲಿನ್ ಐ.ಪಿ.ಎಲ್ ಸಮಾರಂಭ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವ ಸಾಧ್ಯತೆ ಇದೆ. ಐ.ಪಿ.ಎಲ್ ಬೀಳ್ಕೊಡುಗೆ ಸಮಾರಂಭದಲ್ಲಿ ಡ್ಯಾನ್ಸ್ ಪರ್ಫಾಮೆನ್ಸ್ ನೀಡುವುದರ ಜೊತೆಗೆ ‘ರೇಸ್ 3’ ಚಿತ್ರದ ಪ್ರಮೋಷನ್ ಕಾರ್ಯದಲ್ಲಿಯೂ ಜಾಕ್ವೆಲಿನ್ ತೊಡಗಲಿದ್ದಾರೆ. (ಎಂ.ಎನ್)

Leave a Reply

comments

Related Articles

error: