ಕರ್ನಾಟಕಪ್ರಮುಖ ಸುದ್ದಿ

ಅಂಚೆ ವಿಮೆ ಮಾರಾಟಗಾರರಿಗಾಗಿ ಜೂನ್ 4 ರಂದು ನೇರ ಸಂದರ್ಶನ

ಮಂಡ್ಯ (ಮೇ 23): ಅಂಚೆ ಅಧೀಕ್ಷಕರು, ಮಂಡ್ಯ ವಿಭಾಗ ಇವರು ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳ ಮಾರಾಟ ಮಾಡಲು ಹೆಸರು ಸೇರ್ಪಡೆ, ಏಜೆಂಟರುಗಳನ್ನು ತೊಡಗಿಸಿಕೊಳ್ಳಲು ನೇರ ಸಂದರ್ಶನವನ್ನು ಜೂನ್ 4 ರಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಸುವರು.

ಅಭ್ಯರ್ಥಿಗಳು ವ್ಯಕ್ತಿಗತ ವಿವರ, ವಯಸ್ಸಿನ ಪುರಾವೆ, ಶೈಕ್ಷಣಿಕ ಪ್ರಮಾಣ ಪತ್ರ ಇದ್ದಲ್ಲಿ ಅಗತ್ಯ ಪ್ರಮಾಣ ಪತ್ರದೊಂದಿಗೆ ಹಾಜಾರಾಗಬೇಕು. ಅಂಚೆ ಜೀವವಿಮೆ ಉತ್ಪನ್ನಗಳ ಮಾರಾಟ ಕೇವಲ ಮಂಡ್ಯ ಜಿಲ್ಲೆಗೆ ಸೀಮಿತವಾಗಿದ್ದು, ಈ ಉದ್ಯೋಗವು ಯಾವುದೇ ನಿಯಮಿತ ಭತ್ಯೆಗಳನ್ನು ಒಳಗೊಂಡಿರುವುದಿಲ್ಲ ಹಾಗೂ ಮಾರಾಟಕ್ಕೆ ಅನುಗುಣವಾಗಿ ಪ್ರೋತ್ಸಾಹಧನವನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08232-220534 / 220651, ಲಕ್ಷ್ಮೀನಾರಾಯಣ ಗ್ರೂಪ್ ಲೀಡರ್, ಮಂಡ್ಯ ವಿಭಾಗ 9449021312 / 8762965277 ಅನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: