ಸುದ್ದಿ ಸಂಕ್ಷಿಪ್ತ
ಕೃತಿ ಲೋಕಾರ್ಪಣೆ ಸಮಾರಂಭ
ಕರ್ನಾಟಕ ವಿಚಾರ ವೇದಿಕೆ ವತಿಯಿಂದ ಡಿ.9 ರಂದು ಸಂಜೆ 5.30 ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಕರ್ನಾಟಕ ಸಾಹಿತ್ಯ ರತ್ನ ಡಾ.ಸಿ.ಪಿ.ಕೆ ಅವರ ‘ನೋವಿನ ದೇವತೆಗೆ’ ಮತ್ತು ‘ಪರಿಚಯನ’ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸುಪ್ರಸಿದ್ದ ವಿದ್ವಾಂಸ ಡಾ.ಮಳಲಿ ವಸಂತಕುಮಾರ್ ಕೃತಿ ಬಿಡುಗಡೆ ಮಾಡಲಿದ್ದಾರೆ. ಕೃತಿ ಕುರಿತು ಡಾ. ಕವಿತಾ ರೈ ಮಾತನಾಡಲಿದ್ದಾರೆ.