ಮೈಸೂರು

ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾನಕ್ಕೆ ಬೆಂಬಲ ನೀಡಿದ ಸಂಸದ ಪ್ರತಾಪ್ ಸಿಂಹ : ಅಪ್ಲೋಡ್ ಮಾಡಿದ ಫೋಟೋಕ್ಕೆ ಅಭಿಮಾನಿಗಳು ಫಿದಾ

ಮೈಸೂರು,ಮೇ.25:-  ಹಮ್ ಫಿಟ್ ತೋ, ಇಂಡಿಯಾ ಫಿಟ್ ಅಭಿಯಾನ ಆರಂಭಿಸಿದ ಕೇಂದ್ರದ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ತಮ್ಮ ವರ್ಕೌಟ್ ವಿಡಿಯೋ ಅಪ್ಲೋಡ್ ಮಾಡಿ ಕ್ರಿಕೆಟ್ ಮತ್ತು ಸಿನಿಮಾ ತಾರೆಯರನ್ನು ಟ್ಯಾಗ್ ಮಾಡಿ ಸವಾಲೆಸೆದಿದ್ದರು. ಹಲವರು ಸವಾಲನ್ನು ಸ್ವೀಕರಿಸಿ, ಮತ್ತೆ ತಮ್ಮ ಸ್ನೇಹಿತರಿಗೆ ಶೇರ್ ಮಾಡಿ ಸವಾಲೆಸೆದಿದ್ದರು. ಇದೀಗ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೂಡ ಸವಾಲನ್ನು ಸ್ವೀಕರಿಸಿದ್ದಾರೆ.

ಹಮ್ ಫಿಟ್ ಥೋ ಇಂಡಿಯಾ ಫಿಟ್‌ ಅಭಿಯಾನಕ್ಕಾಗಿ  ತನ್ನ ಸದೃಢ ದೇಹದ ಫಿಟ್‌ನೆಸ್ ಪೋಟೋವನ್ನು ಟ್ವಿಟರ್‌ನಲ್ಲಿ ಪ್ರತಾಪ್‌ಸಿಂಹ ಪ್ರಕಟಿಸಿದ್ದಾರೆ. ಬರಿಮೈಯಲ್ಲಿನ ಪೋಟೋವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಪ್ರತಾಪ್‌ಸಿಂಹ ಟ್ವಿಟರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನೀವು ರಾಜಕೀಯ ಬಿಟ್ಟು ಸಿನಿಮಾ ಹೀರೋ ಆಗಿ ಅಂತ ಟ್ವಿಟರ್‌ನಲ್ಲೇ ಹಲವರು ಸಲಹೆ ನೀಡಿದ್ದಾರೆ.

ಹಲವು ಗಣ್ಯರು ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರ ಸವಾಲನ್ನು ಸ್ವೀಕರಿಸಿದ್ದು, ಕ್ರಿಕೆಟಿಗ ವಿರಾಟ್ ಕೊಯ್ಲಿ ಕೂಡ ತನ್ನ ಫೆವರೇಟ್ ವರ್ಕೌಟ್ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: