ಮೈಸೂರು

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿ ಎಲ್ಲಾ ಸೌಲಭ್ಯಗಳನ್ನು ಪಡೆಯುವಂತೆ ಮನವಿ

ಮೈಸೂರು,ಮೇ.25:- ಕರ್ನಾಟಕ ಸ್ಟೇಟ್ ಕನಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ನಲ್ಲಿ ಕಾರ್ಮಿಕರು ಸಂಘದ ಸದಸ್ಯರಾಗಿ ಮಂಡಳಿಯಲ್ಲಿ ಹೆಸರು ನೋಂದಾಯಿಸಿ ಎಲ್ಲಾ ಸೌಲಭ್ಯಗಳನ್ನು ಪಡೆಯುವಂತೆ ವೆಂಕಟೇಶ್ ಬಾಬು ತಿಳಿಸಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಾದ್ಯಂತ ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕ ಕ್ಷೇತ್ರದಲ್ಲಿ ತೊಡಗಿರುವ ಗಾರೆ ಕಾರ್ಮಿಕರು, ಮೇಸ್ತ್ರಿಗಳು, ಟೈಲ್ಸ್ ಕಾರ್ಮಿಕರು,ಪೈಯಂಟರ್ಸ್ ಗಳು, ಕಾರ್ಪೆಂಟರ್ಸ್ ಗಳು, ಎಲೆಕ್ಟ್ರಿಶಿಯನ್ ಗಳು,ಇಟ್ಟಿಗೆ ಸೇರಿದಂತೆ ಹಲವು ಕಾರ್ಮಿಕರನ್ನು ಸಂಘಟಿಸಿ ಪ್ರತ್ಯೇಕ ಮಸೂದೆಯನ್ನು ಜಾರಿಗೊಳಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಸತತವಾಗಿ ಹಮ್ಮಿಕೊಂಡಿದ್ದ ಹಲವಾರು ಹೋರಾಟಗಳ ಪ್ರತಿಫಲವಾಗಿ ಕಟ್ಟಡ ಕಾರ್ಮಿಕರಿಗೆ ಪ್ರತ್ಯೇಕ ಮಸೂದೆಯನ್ನು ಕೇಂದ್ರ ಜಾರಿಗೆ ತಂದಿತು. 2007ರಲ್ಲಿ ಕರ್ನಾಟಕ ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಸಂಘದ ಅಧ್ಯಕ್ಷ ಎನ್.ಪಿ.ಸಾಮಿ ಕಾರ್ಮಿಕರ ಪರ ಪ್ರತಿನಿಧಿಯಾಗಿ ಕಾರ್ಮಿಕರಿಗೆ ಅನುಕೂಲವಾದಂತಹ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಹಲವು ಕೊಡುಗೆಗಳನ್ನು ನೀಡಿದ್ದು, ಸದುಪಯೋಗಪಡಿಸಿಕೊಳ್ಳಿ ಎಂದರು.

ಸುದ್ದಿಗೋಷ್ಠಿಯಲ್ಲಿ ಸೋಮಶೇಖರ್, ಗಣೇಶ್ ಭಟ್, ರಾಗೀಶ್, ಸರ್ವಮಂಗಳ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: