
ಮೈಸೂರು
ಮಾವು ಮೇಳದ ಮೇಲೆ ಪ್ರಭಾವ ಬೀರಿದ `ನಿಫಾ’ ವೈರಸ್
ಮೈಸೂರು,ಮೇ 25-ಕೇರಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್ ಎಲ್ಲರಲ್ಲೂ ಆತಂಕ ಮೂಡಿಸಿದೆ. ಇದೀಗ ನಿಫಾ ವೈರಸ್ ಪ್ರಭಾವ ಮಾವಿನ ಮೇಳದ ಮೇಲೆ ಬೀರಿದೆ.
ಬಾವಲಿ ಕಚ್ಚಿರುವ ಹಣ್ಣುಗಳಿಂದ ಹಾಗೂ ಹಂದಿಗಳಿಂದ ನಿಫಾ ವೈರಸ್ ಹರಡುತ್ತದೆ ಎನ್ನಲಾಗಿರುವುದರಿಂದ ಮಾವು ಮೇಳದ ಮೇಲೆ ವೈರಸ್ ಪ್ರಭಾವ ಬೀರಿದೆ. ಅಲ್ಲದೆ, ಮಾವು ಸೇರಿದಂತೆ ಇತರೆ ಯಾವುದೇ ಹಣ್ಣುಗಳನ್ನು ಯಾರು ಕೊಳ್ಳುತ್ತಿಲ್ಲ. ಇದರಿಂದ ಹಣ್ಣುಗಳ ಬೆಲೆಯೂ ಕಡಿಮೆಯಾಗಿದ್ದು, ಇದು ಬೆಳೆಗಾರರಿಗೆ ಹೊಡೆತವಾಗಿ ಪರಿಣಮಿಸಿದೆ.
ಇತ್ತ ಜಿಲ್ಲೆಯ ವಿವಿಧೆಡೆಗಳಲ್ಲಿ ಈ ಬಾರಿ ಇನ್ನು ಮಾವು ಮಾಗದ ಕಾರಣ ಮಾವು ಮೇಳವನ್ನು ಜೂನ್ ಮೊದಲ ವಾರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ನಿಫಾ ವೈರಸ್ ರಾಜ್ಯದಲ್ಲಿ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಜೂನ್ ಮೊದಲ ವಾರದಿಂದ ಮಾವಿನ ಮೇಳವನ್ನು ಆಯೋಜಿಸಲಾಗುವುದು ಎನ್ನಲಾಗಿದೆ. (ಎಂ.ಎನ್)