ಪ್ರಮುಖ ಸುದ್ದಿ

ಸದ್ದಿಲ್ಲದೇ,ಸಾಮಾನ್ಯರಂತೆ ಹೋಟೆಲ್‌ ವೊಂದರಲ್ಲಿ ಊಟ ಮಾಡುವ ಮೂಲಕ ಗಮನ ಸೆಳೆದ ನಾಗಾಲ್ಯಾಂಡ್ ರಾಜ್ಯಪಾಲ

ರಾಜ್ಯ(ಮಂಗಳೂರು)ಮೇ.25:- ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಸದ್ದಿಲ್ಲದೇ ಮಂಗಳೂರಿಗೆ ಬಂದು ಸಾಮಾನ್ಯರಂತೆ ಹೋಟೆಲ್‌ ವೊಂದರಲ್ಲಿ ಊಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇವರು ಮೂಲತಃ ಉಡುಪಿ ಜಿಲ್ಲೆಯವರು. ಯಾವುದೇ ದೇಶದ ರಾಜ್ಯಪಾಲ ಇರಲಿ ಅವರಿಗೆ ವಿಶೇಷ ಭದ್ರತೆ ಇರುತ್ತದೆ. ಅಲ್ಲದೇ ಈ ಹುದ್ದೆಯಲ್ಲಿರುವವರು ಜನರೊಂದಿಗೆ ಇರುವುದು ಬಹಳ ವಿರಳ. ಆದರೆ ಪಿ.ಬಿ. ಆಚಾರ್ಯರು ಮಂಗಳೂರಿನ ತಾಜ್‌‌ಮಹಲ್ ಹೋಟೆಲ್‌‌ನಲ್ಲಿ ಸಾಮಾನ್ಯರಂತೆ ಬೆರೆತು ಊಟ ಮಾಡಿದ್ದಾರೆ.

ಎರಡು ದಿನಗಳ ಕರಾವಳಿ ಪ್ರವಾಸದಲ್ಲಿರುವ ಪಿ.ಬಿ. ಆಚಾರ್ಯ ಪತ್ನಿ ಕವಿತಾ ಆಚಾರ್ಯ ಮತ್ತು ಸಂಬಂಧಿ ನಾರಾಯಣ ಜೊತೆ ಊಟ ಮಾಡಲು ಈ ಹೋಟೆಲ್‌‌ಗೆ ಬಂದಿದ್ದರು. ಬೆಳ್ತಗಿ ಅಕ್ಕಿ ಊಟ, ಪೂರಿ ಮತ್ತು ಪತ್ರೊಡೆ ಸವಿದ ಅವರು, ಊಟದ ನಂತರ ಸಿಹಿ ತಿಂಡಿ ತಿಂದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: