ಕರ್ನಾಟಕಮೈಸೂರು

ಯಥಾಸ್ಥಿತಿಗೆ ಹೈಕೋರ್ಟ್ ಆದೇಶ : 10 ದಿನಗಳ ತಾತ್ಕಾಲಿಕ ತಡೆ

ವಿಜಯಶ್ರೀಪುರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಗೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯವು  ವಿಜಯಶ್ರೀಪುರದಲ್ಲಿ ಬಡಾವಣೆಯಲ್ಲಿ ಮುಂದಿನ ಹತ್ತು ದಿನಗಳ ವರೆಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದ್ದು ಇದರಿಂದ ಸ್ಥಳೀಯ ನಿವಾಸಿಗಳು ಕೊಂಚ ನಿರಾಳವಾಗಿದ್ದಾರೆ.

ವಿವಾದಿತ ವಿಜಯಶ್ರೀಪುರಂ ಬಡಾವಣೆಯ ಕಟ್ಟಡಗಳನ್ನು ನೆಲಸಮಗೊಳಿಸಲು ಮುಡಾ ಹಾಗೂ ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು, ಆದರೆ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದರಿಂದ ಜಿಲ್ಲಾಡಳಿತವು ಮುಂದಿನ ಹತ್ತುಗಳವರೆಗೆ ಕಟ್ಟಡಗಳ ತೆರವು ಕಾರ್ಯವನ್ನು ಮಾಡುವಂತಿಲ್ಲ ಎಂದು ಆದೇಶಿಸಿದ್ದು ಸೆ.10ರಂದು ಮುಂಜಾನೆ ನಡೆಸಲು ಉದ್ದೇಶಿಸಿದ ಕಟ್ಟಡ ನೆಲಸಮ ಕಾರ್ಯಾಚರಣೆಯನ್ನು ಮುಡಾ  ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ವಿಜಯಶ್ರೀಪುರಂ ಕ್ಷೇಮಾಭಿವೃದ್ಧಿ ಸಂಘದ ಆರ್. ರಂಗನಾಥ ಮಾತನಾಡಿ ಪ್ರಕರಣಕ್ಕೆ  ಸಂಬಂಧಿಸಿದಂತೆ ಸಂಘದಿಂದ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು ಸೆಪ್ಟೆಂಬರ್ 19ರವರೆಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದೆ ಎಂದು ತಿಳಿಸಿದರು.  ಆದರೆ, ಕಳೆದ ನಾಲ್ಕು ತಿಂಗಳ ಹಿಂದೆಯೇ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಸರ್ಕಾರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯಶ್ರೀಪುರಂ ವಿಷಯವನ್ನು ಚರ್ಚಿಸಿ ಸೂಕ್ತ ಪರಿಹಾರೋಪಾಯವನ್ನು ನೀಡಲಿದೆ ಎನ್ನುವ ಆಶಾಯವನ್ನು ವ್ಯಕ್ತಪಡಿಸಿದ ಅವರು ದಂಡ ಪಾವತಿಸಲು ನಿವಾಸಿಗಳು ಸಿದ್ದರಿದ್ದು ಸಕ್ರಮಗೊಳಿಸಿ ನಮ್ಮ ಮನೆ, ಕಟ್ಟಡಗಳನ್ನು ಉಳಿಸಬೇಕು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ 2015ರ ಡಿಸೆಂಬರ್ 16ರಂದೇ ವಿಜಯಶ್ರೀಪುರಂ ಅಕ್ರಮ ಕಟ್ಟಡಗಳ ತೆರವಿಗೆ ಆದೇಶ ನೀಡಿತ್ತು,  ಆದೇಶದಂತೆ ಬಡಾವಣೆಯಲ್ಲಿ ತಲೆ ಎತ್ತಿದ್ದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಮುಡಾ ಸಿದ್ಧತೆ ನಡೆಸಿತ್ತು.

Leave a Reply

comments

Related Articles

error: