ಸುದ್ದಿ ಸಂಕ್ಷಿಪ್ತ
ಸಿದ್ಧ ಸಮಾಧಿ ಯೋಗ ಶಿಬಿರ
ಕುವೆಂಪುನಗರದ ಋಷಿ ಸಂಸ್ಕೃತಿ ವಿದ್ಯಾಕೇಂದ್ರದಲ್ಲಿ ಡಿ.12 ರ ಸೋಮವಾರದಿಂದ ಸಂಜೆ 6.15 ಕ್ಕೆ 14 ದಿನಗಳ ‘ಸಿದ್ಧ ಸಮಾಧಿ ಯೋಗ ಶಿಬಿರ’ದ ಬಗ್ಗೆ ‘ಉಚಿತ ಪರಿಚಯ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಧ್ಯಾನ, ಪ್ರಾಣಾಯಾಮ, ಆಹಾರ ಕ್ರಮ ಮತ್ತು ವ್ಯಕ್ತಿತ್ವ ವಿಕಾಸ, ಆಸನಗಳು, ಸೂರ್ಯ ನಮಸ್ಕಾರ ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9448458050 ಗೆ ಸಂಪರ್ಕಿಸಬಹುದಾಗಿದೆ.