ಕರ್ನಾಟಕ

ಕಾಳು ಮೆಣಸು ಬಳ್ಳಿಗಳನ್ನು ಕಡಿದು ನಷ್ಟಗೊಳಿಸಿದ್ದಾರೆ :ದೂರು

ರಾಜ್ಯ(ಮಡಿಕೇರಿ)ಮೇ.25:- ಕಾಫಿ ತೋಟದಲ್ಲಿದ್ದ ಕಾಳುಮೆಣಸು ಬಳ್ಳಿಗಳನ್ನು ಸಹೋದರನ ಪತ್ನಿ ಹಾಗೂ ಪುತ್ರ ಕತ್ತಿಯಿಂದ ಕಡಿದು ನಷ್ಟಗೊಳಿಸಿದ್ದಾರೆ ಎಂದು ಚೌಡ್ಲು ಗ್ರಾಮದ ಸಿ.ಕೆ.ದೇವಯ್ಯ ಅವರು ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ.

ತನಗೆ ಸೇರಿದ 2 ಎಕರೆ ಕಾಫಿ ತೋಟದಲ್ಲಿದ್ದ ಸುಮಾರು 10 ರಿಂದ 12 ವರ್ಷದ ಕಾಳುಮೆಣಸಿನ 200ಕ್ಕೂ ಅಧಿಕ ಬಳ್ಳಿಗಳನ್ನು ಕತ್ತಿಯಿಂದ ಕಡಿದು ತುಂಡರಿಸಲಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಸಿ.ಪಿ. ದರ್ಶನ್ ಮತ್ತು ಆತನ ತಾಯಿ ಡೀಲಾಕ್ಷಿ ಅವರುಗಳು ಕಡಿದು ನಾಶಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೇವಯ್ಯ ಅವರ ದೂರು ಸ್ವೀಕರಿಸಿರುವ ಪೊಲೀಸರು, ದೂರಿನ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಾಗಿದ್ದು, ನ್ಯಾಯಾಲಯದಿಂದ ಆದೇಶ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: