
ಮೈಸೂರು
ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ
ಮೈಸೂರು,ಮೇ.26:- ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಮೈಸೂರಿನ ದೇವರಾಜ ಠಾಣೆ ಪೊಲೀಸರು ಬಂಧಿಸಿ ಸುಮಾರು 3.50ಲಕ್ಷರೂ.ಮೌಲ್ಯದ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ರಾಜೀವ ನಗರದ ಒಂದನೇ ಹಂತದ ತನ್ವೀರ್ ಬ್ಲಾಕ್ ನಿವಾಸಿ ಮಹಮ್ಮದ್ ಸಲ್ಮಾನ್ ರಾಜಾ(23), ಹಾಗೂ ಶಾಂತಿನಗರದ ನಿವಾಸಿ ಜಮೀರ್ ಪಾಷಾ(38) ಎಂದು ಗುರುತಿಸಲಾಗಿದ್ದು, ಮಹಮ್ಮದ್ ಸಲ್ಮಾನ್ ಹಾಗೂ ಜಮೀರ್ ಪಾಷಾ ಕಳುವು ಮಾಡಿದ್ದ ರಾಯಲ್ ಎನ್ ಫೀಲ್ಡ್ ಬುಲೆಟ್ ನಲ್ಲಿ ಬಿ.ಎನ್ ಸ್ಟ್ರೀಟ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ದೇವರಾಜ ಠಾಣೆ ಸಿಬ್ಬಂದಿ ಎಲ್.ವೇಣುಗೋಪಾಲ್ ಹಾಗೂ ಮಂಜುನಾಥ್ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಕಳುವು ಮಾಡಿದ್ದ ಬೈಕ್ ಗಳ ಬಗ್ಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಎರಡು ರಾಯಲ್ ಎನ್ ಫೀಲ್ಡ್ ಬುಲೆಟ್ ಸೇರಿದಂತೆ ಸುಮಾರು 3.50ಲಕ್ಷದ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಡಿಸಿಪಿ ಮಹಾನಿಂಗ ನಂದಗಾವಿ, ದೇವರಾಜ ವಿಭಾಗದ ಎಸಿಪಿ ಮುರಳೀಧರ್ ಮಾರ್ಗದರ್ಶನದಲ್ಲಿ ದೇವರಾಜ ಠಾಣೆ ಇನ್ಸಪೆಕ್ಟರ್ ಶಾಂತರಾಮು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್ ಇನ್ಸಪೆಕ್ಟರ್ ಮಹದೇವನಾಯಕ, ಮುಖ್ಯಪೇದೆ ವೇಣುಗೋಪಾಲ್, ಸೋಮಶೆಟ್ಟಿ, ಸುರೇಶ್, ಸಿಬ್ಬಂದಿ ಉಮೇಶ್, ಮಂಜುನಾಥ್ ಹಾಗೂ ನಂದೀಶ್ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)