ಪ್ರಮುಖ ಸುದ್ದಿ

ನಾವು ಅಧಿವೇಶನ ದಿಂದ ಪಲಾಯನ ಮಾಡಿಲ್ಲ : ಕೆಎಸ್ ಈಶ್ವರಪ್ಪ

ರಾಜ್ಯ(ದಾವಣಗೆರೆ)ಮೇ.26:-  ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಬೆಳ್ಳೂಡಿ ಕನಕ ಗುರು ಪೀಠದಲ್ಲಿ  ಕನಕ‌ ಕಾಗಿನೆಲೆ ಶಾಖಾಮಠಕ್ಕೆ ತೆರಳಿ ನಿರಂಜನಾನಂದಪುರಿ ಸ್ವಾಮೀಜಿ ಆಶೀರ್ವಾದ ಪಡೆದರು.

ಬಳಿಕ ಮಾತನಾಡಿದ ಅವರು ಮುಖ್ಯಮಂತ್ರಿ  ಕುಮಾರಸ್ವಾಮಿ ಚುನಾವಣಾ ಪೂರ್ವ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದರು. ಈಗ 24 ಗಂಟೆಯೊಳಗೆ ಸಾಲ ಮನ್ನಾ ಮಾಡಲಿ. ಇನ್ನೆರಡು ದಿನಗಳಲ್ಲಿ ಸಾಲ ಮನ್ನಾ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ಆಗ ನಾವು ಸೋಮವಾರಕ್ಕೆ  ನೀಡಿದ ಬಂದ್ ಕರೆಯನ್ನು ಹಿಂಪಡೆಯುತ್ತೇವೆ. ಇಲ್ಲದಿದ್ದರೆ ರೈತರ ಪರವಾಗಿ ನಾವು ನಿಲ್ಲುತ್ತೇವೆ ಎಂದರು. ಯಡಿಯೂರಪ್ಪನವರು ಸಿದ್ದರಾಮಯ್ಯನವರ ಕುರಿತು ಸಾಫ್ಟ್ ಆಗಿದ್ದಾರಾ ಎಂದಿದ್ದಕ್ಕೆ ಯಡಿಯೂರಪ್ಪ ನವರು ಸಿದ್ದರಾಮಯ್ಯನವರ ಬಗ್ಗೆ  ಸಾಫ್ಟ್ ಕಾರ್ನ್ ತೋರಿಲ್ಲ. ಜನತಾದಳದಲ್ಲಿ ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮಾನವೀಯತೆ ದೃಷ್ಟಿಯಿಂದ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ನಾವು ಅಧಿವೇಶನದಿಂದ ಪಲಾಯನ ಮಾಡಿಲ್ಲ. ಅವರು ಪಲಾಯನ ಮಾಡಿದ್ದಾರೆ ಎಂದರೆ ನಾವೇನು ಮಾಡೋಕೆ ಸಾಧ್ಯವಿಲ್ಲ. ನಾವು ಸದನದಿಂದ ಹೊರ ಬಂದಿದ್ದು ರೈತರ ಸಮಸ್ಯೆ ಬಗೆಹರಿಸಲು ಎಂದರು. ಕುಮಾರಸ್ವಾಮಿಯವರು ಸಾಣೀಹಳ್ಳಿ ಸ್ವಾಮೀಜಿ ವಿರುದ್ದ ವಾಗ್ದಾಳಿ ನಡೆಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಯಾವುದೇ ಸ್ವಾಮೀಜಿಗಳು ಯಾವತ್ತೂ ರಾಜಕೀಯ ಮಾಡಿಲ್ಲ. ಶ್ರೀ ಗಳ ಬಗ್ಗೆ ಕುಮಾರಸ್ವಾಮಿಯವರು ವಾಗ್ದಾಳಿ ನಡೆಸಿದ್ದು ಸರಿಯಲ್ಲ. ಶ್ರೀಗಳು ತಪ್ಪು ಮಾಡಿದವರಿಗೆ ತಿದ್ದಿ ಹೇಳುವ ಕೆಲಸ ಮಾಡಿದ್ದಾರೆ. ಶ್ರೀಗಳು ರೈತರ ಪರವಾಗಿ ಪ್ರಶ್ನಿಸಿದ್ದಾರೆಯೇ ವಿನಃ ಬೇರೆಯದಕ್ಕಲ್ಲ. ಸಾಣೀಹಳ್ಳಿ ಶ್ರೀ ಗಳ ಕುರಿತು ಮಾತನಾಡಿರುವುದು ಇಡೀ ಹಿಂದೂಗಳ ಮಠದ ಸ್ವಾಮೀಜಿ ಗಳ ವಿರುದ್ಧ ಮಾತನಾಡಿದಂತೆ. ಸಿಎಂ ಆದ ತಕ್ಷಣ ಸ್ವಾಮೀಜಿ ಗಳಿಗಿಂತ ದೊಡ್ಡವರಾಗಲು ಸಾಧ್ಯವಿಲ್ಲ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: