ಸುದ್ದಿ ಸಂಕ್ಷಿಪ್ತ

ಡಿಎಲ್ ಹಾಗೂ ಎಲ್‍ಎಲ್ ನೀಡಲು ಸಾರಥಿ-4 ಸಾಫ್ಟವೇರ್ ಅಳವಡಿಕೆ

ಮೈಸೂರು, ಮೇ.26:-  ಸಾರಿಗೆ ಇಲಾಖೆಯು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಎನ್.ಐ.ಸಿ. ಅವರ ತಾಂತ್ರಿಕ ನೆರವಿನಿಂದ ವಾಹನ ಚಾಲನಾ ಅನುಜ್ಞಾ ಪತ್ರಗಳ ಸೇವೆಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿಗೊಳಿಸಿರುವ ಕೇಂದ್ರೀಕೃತ ಹಾಗೂ ವೆಬ್ ಆಧಾರಿತ ಸಾರಥಿ-4 ಸಾಫ್ಟವೇರ್ ಅಳವಡಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮೈಸೂರು (ಪಶ್ಚಿಮ), ಚಾಮರಾಜಪುರಂ, ಮೈಸೂರು-570005 ಈ ಕಚೇರಿಯಲ್ಲಿ ಸಾರಥಿ-4 ಹಾಗೂ (STALL Software) ಮೂಲಕ ವಾಹನ ಕಲಿಕಾ ಚಾಲನಾ ಅನುಜ್ಞಾ ಪತ್ರ ಹಾಗೂ ಚಾಲನಾ ಅನುಜ್ಞಾ ಪತ್ರ ಪರೀಕ್ಷೆಗಳನ್ನು ಮೇ.25 ರಿಂದ ಪ್ರಾರಂಭಿಸಲಾಗಿದೆ.
ಸಾರ್ವಜನಿಕರು ಈ ಆಧುನಿಕ ತಂತ್ರಜ್ಞಾನದ ಸಾಫ್ಟವೇರ್ ಮೂಲಕ ವಾಹನ ಕಲಿಕಾ ಅನುಜ್ಞಾ ಪತ್ರ ಮತ್ತು ಅನುಜ್ಞಾ ಪತ್ರಗಳನ್ನು ಪಡೆಯುವ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: