ಮೈಸೂರು

ನಾಳೆ ‘ಸ್ವಾಸ್ಥ ರಸ’ ಆರೋಗ್ಯಕರ ನೈಸರ್ಗಿಕ ಪೇಯ ಲೋಕಾರ್ಪಣೆ

ಮೈಸೂರು,ಮೇ.26 : ಹಂಸ ವಾಹಿನಿ ಪ್ರಾಡಕ್ಟ್  ವತಿಯಿಂದ ಆರೋಗ್ಯಯುತವಾದ ಸ್ವಾಸ್ತ್ಯ ರಸ ಎಂಬ ಪೇಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ ಎಂದು ಸಂಸ್ಥೆಯ ಸಂಸ್ಥಾಪಕಿ ಜಿ.ಶಿಲ್ಪಾ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಫ್ ಟಿಆರ್ ಐ ತಂತ್ರಜ್ಞಾನದೊಂದಿಗೆ ಸಂಪೂರ್ಣ ನೈಸರ್ಗಿಕ ಉತ್ಪನ್ನ ಬಾಳೆದಿಂಡಿನ ರಸದಿಂದ ಪೇಯವನ್ನು ತಯಾರಿಸಿದ್ದು, ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆರೋಗ್ಯದಲ್ಲಿ  ಉತ್ತಮ ಪ್ರಯೋಜನ ನೀಡುವುದು. ಕತ್ತರಿಸಲ್ಪಟ್ಟ ಬಾಳೆಗೊನೆ ದಿಂಡಿನಿಂದ ರಸವನ್ನು ತೆಗೆದು ಪೇಯವನ್ನು ತಯಾರಿಸಲಾಗುತ್ತದೆ, ಕಸದಿಂದ ರಸ ಎನ್ನುವಂತೆ ಕಸವಾಗುತ್ತಿದ್ದ ಬಾಲೆ ದಿಂಡಿಗೂ ಬೆಲೆ ನೀಡಲಾಗುವುದು ಎಂದು ತಿಳಿಸಿದರು.

ನಾಳೆ (27) ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿಯ ಲಯನ್ಸ್ ಸೆಂಟರ್ಲ್ ಭವನದಲ್ಲಿ ಈ ಪೇಯವನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೈಗಾರಿಕಾ ಮತ್ತು ವಾಣಿಜ್ಯ ವಿಭಾಗದ ಜಂಟಿ ನಿರ್ದೆಶಕ ರಾಮಕೃಷ್ಣೇ ಗೌಡ, ಸಿಎಫ್ ಟಿ.ಅರ್.ಐ ಹಿರಿಯ ವಿಜ್ಞಾನಿ ಬಿ.ವಿ.ಸತ್ಯೇಂದ್ರ ರಾವ್, ನಿವೃತ್ತ ಜಂಟಿ ನಿರ್ದೇಶಕ ಡಾ.ಕೆ.ರಾಧಾಕೃಷ್ಣ  ಮತ್ತಿತರರು ಇರುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿ ಯಲ್ಲಿ ಡಿಎಫ್ಆರ್.ಎಲ್ ಜಂಟಿ ನಿರ್ದೇಶಕ ರಾಮಕೃಷ್ಣ , ನರೇಂದ್ರ ಬಾಬು , ಮಂಜುನಾಥ್ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: