ಮೈಸೂರು

ಸೋತೊಡನೆ ನಾನೂ ರಾಜಕೀಯ ನಿವೃತ್ತಿ ಪಡೆಯಲ್ಲ,ನನ್ನ ಶಕ್ತಿ ಇರೋವರೆಗೂ ಕೆಲಸ ಮಾಡುತ್ತೇನೆ : ಮಾಜಿ ಶಾಸಕ ವಾಸು

ಮೈಸೂರು,ಮೇ.26:- ನಾನು ಸೋಲು ಮತ್ತು ಗೆಲುವು ಎರಡನ್ನು ಸಮಾನಾಗಿ ಸ್ವೀಕರಿಸುತ್ತೇನೆ. ಸೋತತಕ್ಷಣ ಮನೆಯಲ್ಲಿ ಕೂರುವ ವ್ಯಕ್ತಿ ನಾನಲ್ಲ ಎಂದು ಚಾಮರಾಜ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ವಾಸು ತಿಳಿಸಿದರು.

ಖಾಸಗಿ ಹೋಟೆಲ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಮೊದಲೂ ಕೂಡಾ ಎರಡು ಬಾರಿ ಸೋತಿದ್ದೆ.ಆದರೆ ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಮುಖ್ಯ. ನನ್ನ ಎಲ್ಲಾ ಅಭಿವೃದ್ದಿ ಕೆಲಸಗಳಿಗೂ ಮಾಧ್ಯಮದವರ ಬೆಂಬಲ ಸಿಕ್ಕಿದೆ. ನನ್ನ ಕ್ಷೇತ್ರದಲ್ಲಿ ಕಳೆದ 5ವರ್ಷದಿಂದ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ನನಗೆ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಪಕ್ಷಾತೀತವಾಗಿ ಸ್ನೇಹಿತರ ಬೆಂಬಲ ಸಿಕ್ಕಿತ್ತು. ಚುನಾವಣೆಗೂ ಮುನ್ನ ನನ್ನ ಮೇಲೆ ಬಹಳಷ್ಟು ಊಹಾಪೋಹಗಳಿದ್ದವು. ಅದ್ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ನನ್ನ ಪಾಡಿಗೆ ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸುತ್ತಿದ್ದೆ ಎಂದರು.

ನನಗೆ ನನ್ನ ಕ್ಷೇತ್ರದ ಕೆಲಸ ಮಾತ್ರ ಮುಖ್ಯವಾಗಿತ್ತು. ರಾಜ್ಯದ ಕೆಲಸ ಅಥವಾ ಸಭೆಗಳಲ್ಲ. ಸೋಲು ಗೆಲವು ಎರಡನ್ನೂ ಸಮನಾಗಿ ಸ್ವೀಕಾರ ಮಾಡುತ್ತೇನೆ. ಚುನಾವಣೆ ನಾಳೆ ಇರುವಾಗ ನಾನೂ ಆಸ್ಪತ್ರೆಯಲ್ಲಿದ್ದೇನೆ ಅಂತ ಅಪಪ್ರಚಾರ ಮಾಡಿದರು. ವೆಂಟಿಲೇಟರ್ ನಲ್ಲಿ ಇದ್ದೇನೆ, ಇನ್ನೇನು ಸಾಯುತ್ತಾರೆ ಎಂದು ಪ್ರಚಾರ ಮಾಡಿದರು. ಈ ವೇಳೆ ಸ್ವತಹ ಮಳೆಯಲ್ಲೇ ನಾನು ಪಡುವಾರಳ್ಳಿಗೆ ಭೇಟಿ ನೀಡಿದೆ. ನಾನೂ ಕ್ಷೇತ್ರದ ಅಭಿವೃದ್ಧಿಗಾಗಿ ಮಾತ್ರ ಹೆಚ್ಚಿನ ಆದ್ಯತೆ ಕೊಡುತ್ತೇನೆ ಎಂದು ತಿಳಿಸಿದರು.

ಚಾಮರಾಜ ಕ್ಷೇತ್ರದಲ್ಲಿ ಆರೋಗ್ಯ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇನೆ. ಹೊಸದಾಗಿ ನೆಪ್ರೋಲಾಜಿ ಸೆಕ್ಷನ್ ತೆರೆಯುತ್ತಿದೆ. ಇದು ಕೆ.ಆರ್.ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ವಿದೇಶದಿಂದ ಬಂದವರು ಹೊಸ ಕಟ್ಟಡ ನೋಡಿ ಇದೊಂದು ವಿವಿ ಇದ್ದಂತಿದೆ. ವಾಸು ಅವರೇ ನಿಮ್ಮ ಕೆಲಸ ತುಂಬಾ ಚೆನ್ನಾಗಿದೆ ಎಂದು ಪ್ರಶಂಸಿಸಿದ್ದಾರೆ. ಪಾರ್ಕ್, ರಸ್ತೆ, ಒಳಚರಂಡಿ ಸೇರಿ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನನಗೆ ಎಲ್ಲ ಇಲಾಖೆಯಲ್ಲೂ ಸ್ಪಂದನೆ ನೀಡಿದ್ದಾರೆ. ಫೈಲ್ ತೆಗೆದುಕೊಂಡು ಹೋದಾಗ ನನಗೆ ಸ್ಪಂದಿಸಿದ್ದಾರೆ. ಹಾಗಾಗಿ ಇಷ್ಟೆಲ್ಲ ಹೆಸರು ಮಾಡಲು ನನಗೆ ಸಹಕಾರ ನೀಡಿದ್ದಾರೆ. ನಾನೂ ಮಾಧ್ಯಮ ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು. ನೀವೂ ಯಾಕೆ ಬಂದ್ರೀ ಮತ ಕೇಳೋಕೆ ಅಂತ ಹೇಳಿದ್ದರು. ಆದರೆ ರಾಜಕೀಯದಲ್ಲಿ ನಾನೊಬ್ಬನೇ ಅಲ್ಲ. ಎಲ್ಲರೂ ಗೆಲ್ಲಬೇಕಿದ್ದು, ನಾನೂ ನನ್ನ ಅಭಿವೃದ್ಧಿ ಕೆಲಸ ಮುಂದುವರೆಸುತ್ತೇನೆ. ಸೋತೊಡನೆ ನಾನೂ ರಾಜಕೀಯ ನಿವೃತ್ತಿ ಪಡೆಯಲ್ಲ. ನನ್ನ ಶಕ್ತಿ ಇರೋವರೆಗೂ ನಾನೂ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯ ಪ್ರಶಾಂತ್ ಗೌಡ, ಕವೀಶ್ ಗೌಡ, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: