ಸುದ್ದಿ ಸಂಕ್ಷಿಪ್ತ

ಮೇ.29ರಿಂದ ಸಂಗೀತಾರಾಧನೆ : ವಿದುಷಿಗಳಿಂದ ಸಂಗೀತ ವಾದನ ಕಛೇರಿ

ಮೈಸೂರು,ಮೇ.26 : ವಿವಿ ಪುರಂನ ಶ್ರೀ ತ್ಯಾಗರಾಜ ಸಂಗೀತ ಚಾರಿಟಬಲ್ ಟ್ರಸ್ಟ್ ನಿಂದ ವಿದ್ವಾನ್ಟಿ.ಆರ್. ಮಹಾಲಿಂಗಪ್ಪ ಸಂಸ್ಮರಣಾರ್ಥ ಮೇ.29 ರಿಂದ 31ರವರೆಗೆ ಪ್ರತಿ ದಿನ ಸಂಜೆ 6ರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.

ವಿ.ಹೆಚ್.ಸಿ.ವೇಣುಗೋಪಾಲ್ ಅವರಿಂದ ವೇಣುವಾದನ, ವಿದುಷಿ.ವೀಣಾ ಸುರೇಶ್ ಅವರಿಂದ ಪಿಟೀಲು, ವಿದುಷಿ ಹೆಚ್.ಎಲ್.ಶಿವಶಂಕರಸ್ವಾಮಿ ಅವರು ಮೃದಂಗ, ವಿದುಷಿ ಎಂ.ಆರ್.ಮಂಜುನಾಥ ಅವರಿಂದ ಘಟಂ ನಲ್ಲಿ ಸಾಥ್ ನೀಡುವರು.ಕ್ಕೆ

ಮೇ.30ರಂದು ವಿದುಷಿ ಕೊಳೂರು ರವಿಚಂದ್ರನ್ ಅವರಿಂದ ಪಿಟೀಲು ವಾದನ, ವಿದುಷಿ ಎನ್.ಎನ್.ಗಣೇಶ್ ಕುಮಾರ್ ಪಿಟೀಲುನಲ್ಲಿ ಜೊತೆಯಾಗುವುದು.

ಮೇ.31ರಂದು ಸಂಜೆ 5.30ಕ್ಕೆ ವಿದುಷಿ ಜಿ.ರಾಜ ನಾರಾಯಣ್ ಅವರಿಗೆ ಗೌರವ ಸಮರ್ಪಣೆಯನ್ನು ಏರ್ಪಡಿಸಿದೆ ಎಂದು ಕಾರ್ಯದರ್ಶಿ ನರಸಿಂಹಮೂರ್ತಿ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: