ಮೈಸೂರು

ಮೇಲ್ಛಾವಣಿ ಸೌರಶಕ್ತಿ ವಿದ್ಯುತ್ ಘಟಕಕ್ಕೆ ಚಾಲನೆ

ಮೈಸೂರು,ಮೇ.26 : ಆರ್ಬ್ ಎನರ್ಜಿ ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟ ಮೇಲ್ಛಾವಣಿ ಸೌರ ಶಕ್ತಿ ವಿದ್ಯುತ್ ಘಟಕದ ಉದ್ಘಾಟನೆಯನ್ನು  ದಿಲೀಪ್ ಆರ್ ಮತ್ತು ಕಲ್ಲೇಶಪ್ಪ ಅವರ ನಿವಾಸದಲ್ಲಿ ರಾಜ್ಯ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸರಗೂರು ನಟರಾಜು ನೆರವೇರಿಸಿದರು.

ಆರ್ಬ್ ಎನರ್ಜಿ ಪ್ರಧಾನ ವ್ಯವಸ್ಥಾಪಕ ದತ್ತಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸೌರ ವಿದ್ಯುತ್ ಘಟಕದ ಕಾರ್ಯವೈಖರಿಯನ್ನು ವಿವರಿಸಿದ್ದು ಆರ್ಬ್ ಎನರ್ಜಿ ಸಣ್ಣ ಮತ್ತು ಮಾಧ್ಯಮ ಕೈಗಾರಿಕೆಗಳಿಗೆ ಮೇಲ್ಛಾವಣಿ ಸೌರ ವಿದ್ಯುತ್ ಘಟಕ ಅಳವಡಿಕೆ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಮೋದ ಚಿಕ್ಕಮ್ಮ, ಜೆಸ್ಕಾಂ ಸ.ಕಾ.ನಿರ್ವಾಹಕ ಅಭಿಯಂತರ ಸಿ.ಉಮೇಶ್ ಮತ್ತಿತರರು ಇದ್ದರು. (ಕೆ.ಎಂ.ಆರ್)

Leave a Reply

comments

Related Articles

error: