ಮೈಸೂರು

ಸ್ವಾತಂತ್ರ್ಯ ವೀರ ಸಾವರ್ಕರ್ ರವರ 135ನೇ ಜಯಂತಿ ಆಚರಣೆ

ಮೈಸೂರು,ಮೇ.27:- ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ವೀರ ಸಾವರ್ಕರ್ ರವರ 135ನೇ ಜಯಂತಿಯನ್ನು ವೀರ ಸಾವರ್ಕರ್ ಯುವ ಬಳಗದ ವತಿಯಿಂದ ನಗರದ ಡಿ.ಬನುಮಯ್ಯ ಚೌಕದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.

ವೀರ್ ಸಾವರ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೆಯ್ಯುವ ಮೂಲಕ ಗೌರ ಅರ್ಪಿಸಲಾಯಿತು.  ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್ ಸಾವರ್ಕರ್ ರವರ ಬದುಕು ಹಾಗೂ ಹೋರಾಟಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ವೀರ ಸಾವರ್ಕರ್ ಯುವ ಬಳಗದ ಉಪಾಧ್ಯಕ್ಷ ಸಂದೇಶ್, ಟಿ.ಎಸ್.ಅರುಣ್, ಕಾರ್ಯದರ್ಶಿ ದೀಪಕ್, ಮುಖಂಡರಾದ ಟಿ.ಪಿ.ಮಧುಸೂದನ್, ರಂಗನಾಥ್, ಕುಮಾರ್ ಗೌಡ, ಪ್ರಮೋದ್ ಗೌಡ, ಪರಶಿವಮೂರ್ತಿ, ಎಸ್.ಎನ್.ರಾಜೇಶ್, ಸುರೇಂದ್ರ, ಶ್ರೀನಿವಾಸ್, ಗುರುಮೂರ್ತಿ, ರವಿನಂದನ್, ಚೆನ್ನಬಸವಣ್ಣ, ಗೈಡ್ ಚಂದ್ರು ಸೇರಿದಂತೆ ಅನೇಕರು ಭಾಗವಹಿಸಿದ್ದರು. (ಕೆ.ಎಸ್ಎ, ಎಸ್.ಎಚ್)

Leave a Reply

comments

Related Articles

error: