ಮೈಸೂರು

ಬಿಜೆಪಿ ಬಂದ್ ಗೆ ಗುಲಾಬಿ ನೀಡುವ ಮೂಲಕ ವಿರೋಧ ವ್ಯಕ್ತಪಡಿಸಿದ ಜೆಡಿಎಸ್

ಮೈಸೂರು,ಮೇ.28:- ಬಿಜೆಪಿ ಬಂದ್ ಗೆ ಮೈಸೂರು  ಜೆಡಿಎಸ್ ಜನತೆಗೆ ಗುಲಾಬಿ ನೀಡುವ ಮೂಲಕ ವಿರೋಧ ವ್ಯಕ್ತಪಡಿಸಿದೆ.

ಬಿಜೆಪಿ ರೈತರ ಸಾಲಮನ್ನಾಗೆ ಆಗ್ರಹಿಸಿ ಕರೆದಿದ್ದ ಬಂದ್‌ಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿದೆ. ಬಂದ್‌ಗೆ ಪ್ರತಿಯಾಗಿ ಜೆಡಿಎಸ್‌ ಅಂಗಡಿಗಳಿಗೆ ತೆರಳಿ ಗುಲಾಬಿ ನೀಡಿ ಧೈರ್ಯ ಹೇಳುತ್ತಿದೆ. ಬಂದ್‌ಗೆ ಹೆದರದೆ ಧೈರ್ಯವಾಗಿ ವ್ಯಾಪಾರ ನಡೆಸಿ ಎಂದು  ಜೆಡಿಎಸ್ ಕಾರ್ಯಕರ್ತರು ಹೇಳುತ್ತಿದ್ದು, ಜೆಡಿಎಸ್ ವಿದ್ಯಾರ್ಥಿ ಘಟಕ ಕೂಡ ಜೊತೆಯಾಗಿದೆ. ವಿದ್ಯಾರ್ಥಿ ಘಟಕ  ಬಂದ್ ವಿರೋಧಿಸಿ ಗುಲಾಬಿ ದಿನ ಆಚರಣೆ ಮಾಡುತ್ತಿದೆ. ಅಗ್ರಹಾರದ ಸುತ್ತಮುತ್ತ ಅಂಗಡಿಗಳಿಗೆ ಗುಲಾಬಿ ಹೂ ನೀಡಿ ಬಂದ್‌ಗೆ ವಿರೋಧ ವ್ಯಕ್ತಪಡಿಸಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: