ಮೈಸೂರು

ಬಂದ್ ಗೆ ಬೆಂಬಲ ನೀಡದ ಅಂಗಡಿಗಳಿಗೆ ತೆರಳಿ ಹೂ ಹಾಗೂ ಶಾಲು ನೀಡಿದ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ

ಮೈಸೂರು,ಮೇ.28:- ಸಮಗ್ರ ಕರ್ನಾಟಕ  ರಕ್ಷಣಾ ವೇದಿಕೆ ನಂಜು ಮಳಿಗೆ ವೃತ್ತದಲ್ಲಿಂದು ಬಂದ್ ಗೆ ಬೆಂಬಲ ನೀಡದ ಅಂಗಡಿಗಳಿಗೆ ತೆರಳಿ ಮಾಲೀಕರಿಗೆ ಹೂ ಹಾಗೂ ಶಾಲು ನೀಡಿದೆ.

ವೇದಿಕೆಯ ಅಧ್ಯಕ್ಷ   ಅರವಿಂದ್ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಸ್ವಯಂ ಪ್ರೇರಿತ  ಬಂದ್ ಗೆ ಕರೆನೀಡಿದ್ದು ಅದನ್ನು ವಿರೋಧಿಸಿ ಅಂಗಡಿ ಮಾಲಿಕರಿಗೆ ಗುಲಾಬಿ ನೀಡುತ್ತಿದ್ದೇವೆ ಎಂದು ತಿಳಿಸಿದರು. ಬಂದ್ ಗೆ ಬೆಂಬಲ ನೀಡದೆ ಅಂಗಡಿ ತೆರೆದಿರುವ ಅಂಗಡಿ ಮಾಲಿಕರಿಗೆ ಗುಲಾಬಿ ಹೂ ಹಾಗೂ ಶಾಲು  ಹೊದಿಸಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭ ಡೈರಿ ವೆಂಕಟೇಶ್ ಕುಮಾರ್ ,ರಮೇಶ್, ಹಿತೇಶ್,ಗುರುಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: