ಮನರಂಜನೆ

`ಎಂಟು’ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ವಸಿಷ್ಠ.!

ಬೆಂಗಳೂರು,ಮೇ 28-ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟ ವಸಿಷ್ಠ ಎನ್.ಸಿಂಹ ತಮ್ಮ ಮುಂದಿನ ಚಿತ್ರದಲ್ಲಿ ಎಂಟು ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಹೌದು, ಸುಮಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಾಲಚಕ್ರ ಚಿತ್ರದಲ್ಲಿ ವಸಿಷ್ಠ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ವಸಿಷ್ಠ ಎಂಟು ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಫಸ್ಟ್ ಲುಕ್ ನಿಂದಲೇ ಸಖತ್ ಕ್ಯೂರಿಯಾಸಿಟಿ ಮೂಡಿಸಿದ್ದ ಕಾಲಚಕ್ರ ಚಿತ್ರತಂಡ ಸದ್ಯ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಮೋಷನ್ ಪೋಸ್ಟರ್ ಮೂಲಕ ಕುತೂಹಲವನ್ನು ದುಪ್ಪಟ್ಟು ಮಾಡಿರುವ ಕಾಲಚಕ್ರ ಚಿತ್ರತಂಡ ಕಾಲಬದಲಾದಂತೆ ಮನುಷ್ಯ ಆಯಾ ಸಂದರ್ಭಕ್ಕೆ ತಕ್ಕಂತೆ ವರ್ತಿಸಬೇಕಾಗುತ್ತದೆ ಎನ್ನುವುದನ್ನು ಮೋಷನ್ ಪೋಸ್ಟರ್ ಮೂಲಕ ಹೇಳಲು ಹೊರಟಿರುವಂತಿದೆ.

ರಶ್ಮೀ ಫಿಲ್ಮ್ಸ್ ನಿರ್ಮಾಣದಲ್ಲಿ ತಯಾರಾಗಿರುವ ಕಾಲಚಕ್ರ ಚಿತ್ರವನ್ನು ನಾನಿ ಸಿನಿಮಾ ಖ್ಯಾತಿಯ ಸುಮಂತ್ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿರುವ ಚಿತ್ರತಂಡ ಜೂನ್ ಅಥವಾ ಜುಲೈನಲ್ಲಿ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿದೆ. ಮೋಷನ್ ಪೋಸ್ಟರ್ ಮೂಲಕ ಕಾಲಚಕ್ರ ಪಾರ್ಟ್ 2 ಕೂಡ ಬರಬಹುದು ಎನ್ನುವ ನಿರೀಕ್ಷೆಯನ್ನೂ ಹುಟ್ಟುಹಾಕಿದ್ದಾರೆ.

ವಸಿಷ್ಠ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಸುಮಾರು 6 ವರ್ಷ ಕಳೆದಿದೆ. 12ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿರುವ ವಸಿಷ್ಠ ಪ್ರತಿ ಸಿನಿಮಾದಲ್ಲಿಯೂ ವಿಭಿನ್ನವಾಗಿರುವ ಪಾತ್ರವನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: