ಕ್ರೀಡೆದೇಶ

ಅಭಿಮಾನಿಗಳ ಟ್ವಿಟ್ ಗೆ ಪ್ರತಿಕ್ರಿಯಿಸಿದ ರಶೀದ್ ಖಾನ್

ನವದೆಹಲಿ,ಮೇ 28-ಐಪಿಎಲ್ 11ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಪ್ರವೇಶಿಸಲು ಅಫ್ಘಾನಿಸ್ತಾನದ ರಶೀದ್ ಖಾನ್ ಅವರ ಆಲ್ ರೌಂಡರ್ ಆಟ ಪ್ರಮುಖ ಪಾತ್ರವಹಿಸಿತ್ತು. ಇದಾದ ನಂತರ ರಶೀದ್ ಖಾನ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಟ್ವಿಟ್ ಗಳನ್ನು ಮಾಡುತ್ತಿದ್ದರು. ಇದಕ್ಕೆ ಕೊನೆಗೂ ರಶೀದ್ ಖಾನ್ ಪ್ರತಿಕ್ರಿಯಿಸಿದ್ದಾರೆ.

ಅಭಿಮಾನಿಗಳ ಟ್ವಿಟ್ ಕುರಿತು ಟ್ವಿಟ್ ಮಾಡಿರುವ ರಶೀದ್, ನಾನೊಬ್ಬ ಹೆಮ್ಮೆಯ ಅಫ್ಘಾನಿ. ನಾನು ನನ್ನ ದೇಶದಲ್ಲಿಯೇ ಇದ್ದು ಅದಕ್ಕಾಗಿ ಸೇವೆ ಸಲ್ಲಿಸುತ್ತೇನೆ ಹಾಗೂ ಹೋರಾಡುತ್ತೇನೆ. ನಾವು ಶಾಂತಿ ಪಸರಿಸುತ್ತೇವೆ. ನಮ್ಮ ದೇಶಕ್ಕೆ ನಾವು ಬೇಕಾಗಿದ್ದೇವೆ ಎಂದಿದ್ದಾರೆ.

ಈ ಬಗ್ಗೆ ಅಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಝಾಯಿ, ಮೋದಿಗೆ ಟ್ವಿಟ್ ಮಾಡಿ, ಅವರು ಕ್ರಿಕೆಟ್ ಲೋಕದ ಆಸ್ತಿ. ಅವರನ್ನು ನಾವು ಬಿಟ್ಟು ಕೊಡುವುದಿಲ್ಲ ಎಂದಿದ್ದರು. ನಂತರ ಅಫ್ಘಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅತಿಫ್ ಮಶಲ್, ಅವರಿಗೆ ಎಲ್ಲಾ ಕಡೆ ಬಹಳಷ್ಟು ಬೇಡಿಕೆ ಇದೆಯೆಂದು ಗೊತ್ತು. ಆದರೆ ಅವರು ಯಾವತ್ತೂ ಎಲ್ಲಿಯೂ ಹೋಗುವುದಿಲ್ಲ. ಅವರೊಬ್ಬ ಹೆಮ್ಮೆಯ ಅಫ್ಘಾನಿ ಎಂದು ಟ್ವೀಟ್ ಮಾಡಿದ್ದರು.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಐಪಿಎಲ್ ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿಸಲು ರಶೀದ್ ಖಾನ್ ಬ್ಯಾಟಿಂಗ್ ನಲ್ಲಿ 10 ಎಸೆತಗಳಲ್ಲಿ ಅಜೇಯ 34 ರನ್ ಸಿಡಿಸಿದ್ದು ಹಾಗೂ ಬೌಲಿಂಗ್ ನಲ್ಲಿ 4 ಓವರ್ ನಲ್ಲಿ 19 ರನ್ ನೀಡಿ ಪ್ರಮುಖ 3 ವಿಕೆಟ್ ಗಳನ್ನು ಪಡೆದಿದ್ದು ನೆರವಾಗಿತ್ತು. (ಎಂ.ಎನ್)

 

Leave a Reply

comments

Related Articles

error: