ಪ್ರಮುಖ ಸುದ್ದಿಮೈಸೂರು

ವಿಷ್ಣು ಸ್ಮಾರಕ : ಗುದ್ದಲಿ ಪೂಜೆ ನೆರವೇರಿಸಿದ ಭಾರತಿ ವಿಷ್ಣುವರ್ಧನ್

bharati-web-3ಮೈಸೂರು ಜಿಲ್ಲೆಯ ಹೆಚ್. ಡಿ.ಕೋಟೆ ರಸ್ತೆಯ  ಉದ್ಬೂರು ಕ್ರಾಸ್ ನ ಹಾಲಾಳು ಎಂಬಲ್ಲಿ ಮಂಗಳವಾರ ಭಾರತಿ ವಿಷ್ಣುವರ್ಧನ್ ಅವರು ವಿಷ್ಣು ಸ್ಮಾರಕಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಗುದ್ದಲಿ ಪೂಜೆ ನೆರವೇರಿಸಿದ ಭಾರತಿ ವಿಷ್ಣುವರ್ಧನ್ ಮಾತನಾಡಿ ಉದ್ದೇಶಿತ ಸ್ಥಳದಲ್ಲಿ ಹೋಮ ಮತ್ತು ಪೂಜೆ ಮಾತ್ರ ನೆರವೇರಿಸಿಲಾಗಿದೆ. ಇಷ್ಟರಲ್ಲೇ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಶಂಕುಸ್ಥಾಪನೆ ಕಾರ್ಯಕ್ರಮ ನಿಗದಿಯಾಗಲಿದೆ ಎಂದರು. ಗುದ್ದಲಿಪೂಜೆಯ ವೇಳೆ ಉಪಸ್ಥಿತರಿದ್ದ ವಿಷ್ಣು ಅಭಿಮಾನಿಗಳು, ಸ್ನೇಹಿತರು, ಸಂಬಂಧಿಗಳಿಗೆ ಧನ್ಯವಾದ ತಿಳಿಸಿದರು.ಇದಕ್ಕೂ ಮುನ್ನ ಮಂಗಳವಾರ  ಬೆಳಿಗ್ಗೆ 9 ಗಂಟೆಗೆ ಶುಭ ಧನುರ್‌ ಲಗ್ನದಲ್ಲಿ ಕಳಶ ಪೂಜೆ, ಭೂಮಿ ಪೂಜೆ, ಚಾಮುಂಡಿ ಹೋಮ ನಡೆಸಲಾಯಿತು. ಈ ಸಂದರ್ಭ ಭಾರತಿ ವಿಷ್ಣುವರ್ಧನ್ ಅಳಿಯ ಅನಿರುದ್ಧ ಕುಟುಂಬದ ಸದಸ್ಯರು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಉಪಸ್ಥಿತರಿದ್ದರು.

 ಜಯಲಲಿತಾ ನಿಧನದಿಂದ ರದ್ದಾದ ಕಾರ್ಯಕ್ರಮ :

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ 5 ಎಕರೆ ಸರ್ಕಾರಿ ಭೂಮಿಯಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮಂಗಳವಾರ ಗುದ್ದಲಿ ಪೂಜೆ ನೇರವೇರಿಸಬೇಕಿತ್ತು. ಆದರೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ನಿಧನದಿಂದ ರಾಜ್ಯದಲ್ಲಿ ಒಂದು ದಿನ ಶೋಕಾಚರಣೆ ಆಚರಿಸಲಾಗುತ್ತಿರುವುದಲ್ಲದೆ, ಸಿದ್ದರಾಮಯ್ಯ ಅವರು ಜಯಲಲಿತಾ ಅವರ ಅಂತಿಮ ದರ್ಶನಕ್ಕೆ ತೆರಳಿದ ಹಿನ್ನೆಲೆಯಲ್ಲಿ  ಸರ್ಕಾರಿ ಕಾರ್ಯಕ್ರಮ ರದ್ದಾಗಿದೆ.

Leave a Reply

comments

Related Articles

error: