ಮೈಸೂರು

ಅಂಬೇಡ್ಕರ್ ಅಪರಿಮಿತ ಜ್ಞಾನ ಸಂವಿಧಾನ ಸಮರ್ಥವಾಗಿರಲು ಕಾರಣ : ಶ್ರೀನಿವಾಸ್ ಪ್ರಸಾದ್

ಅಂಬೇಡ್ಕರ್ ಅವರ ಅಪರಿಮಿತ ಜ್ಞಾನವೇ ನಮ್ಮ ಸಂವಿಧಾನ ಸಮರ್ಥವಾಗಿರಲು ಕಾರಣ. ಜಾಗತಿಕ ಯುದ್ಧಗಳು, ಕ್ರಾಂತಿಗಳು, ಚರಿತ್ರೆಯ ಪ್ರತಿ ಪುಟಗಳನ್ನೂ ಜಾಲಾಡಿದ್ದರಿಂದ ಅವರಿಗೆ ಇದೆಲ್ಲ ಸಾಧ್ಯವಾಯಿತು ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ತಿಳಿಸಿದರು.

ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನವು ಜೆ.ಎಲ್.ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಕಾಲೀನ ಭಾರತ ಮತ್ತು ಸಂವಿಧಾನ ಕುರಿತ ವಿಚಾರ ಸಂಕಿರಣವನ್ನು ವಿ.ಶ್ರೀನಿವಾಸ್ ಪ್ರಸಾದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ಅನಕ್ಷರತೆ, ಬಡತನ, ಮೌಢ್ಯದಂಥ ಸಾಮಾಜಿಕ ಪಿಡುಗುಗಳು ತುಂಬಿದ್ದವು. ಇಂಥ ದೇಶವನ್ನು ಮುನ್ನಡೆಸಲು ಹೇಗೆ ಸಾಧ್ಯ ಎಂದು ಬ್ರಿಟಿಷ್ ಅಧಿಕಾರಿಗಳು ಟೀಕಿಸಿದ್ದರು. ಆದರೆ ಅಂಬೇಡ್ಕರ್ ಜಗತ್ತಿಗೆ ಭಾರತೀಯರ ಸಾಮರ್ಥ್ಯ ಏನೆಂಬುದನ್ನು ತೋರಿಸಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ಎಂ.ನಾಗರಾಜು, ವಾಸುದೇವನ್, ಹಾರೋಹಳ್ಳಿ ಗೋಪಾಲ, ಶಿವರುದ್ರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ‘ಆಚೆ-ಈಚೆ’ ಕೃತಿ ಹಾಗೂ ಚಂದ್ರ ಸ್ವರೂಪ ವಿಶೇಷಾಂಕವನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭ ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಮಾಜಿ ಸದಸ್ಯ ಎಂ.ಸಿ. ಚಿಕ್ಕಣ್ಣ, ನಿಸರ್ಗ ಸಂಸ್ಥೆಯ ನಿರ್ದೇಶಕ ನಂಜುಂಡಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: