ಮೈಸೂರು

ಮಾಧ್ಯಮ ಶಾಲೆ : ಆಸಕ್ತರಿಂದ ಅರ್ಜಿ ಆಹ್ವಾನ

ಮೈಸೂರು,ಮೇ.28 : ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ವಿಶ್ವವಿದ್ಯಾನಿಲಯದ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರ ಸಹಯೋಗದಲ್ಲಿ ‘ಮಾಧ್ಯಮ ಶಾಲೆ’ ಆರಂಭವಾಗುತ್ತಿದ್ದು, ತರಬೇತಿ ಪಡೆಯಲಿಚ್ಚಿಸುವ ಆಸಕ್ತರು ಅರ್ಜಿ ಸಲ್ಲಿಸಬಹುದು.

ಸುಮಾರು 6 ತಿಂಗಳ ಕಾಲ ವೃತ್ತಿ ಪೂರಕವಾಗಿ, ಪ್ರಾಯೋಗಿಕವಾಗಿ ಪತ್ರಿಕೋದ್ಯಮ ತರಬೇತಿ ನೀಡಲಿದೆ. ವೃತ್ತಿ ನಿರತ ಪತ್ರಕರ್ತರು, ಪತ್ರಿಕೋದ್ಯಮ ಪ್ರಾಧ್ಯಾಪಕರು ತರಬೇತಿ ನೀಡುವರು.

ಕಲಿಕೆ ಮಾಹಿತಿ ಜತೆಗೆ ವೃತ್ತಿ ನೈಪುಣ್ಯತೆ ರೂಪಿಸುವುದು ತರಬೇತಿಯ ಉದ್ದೇಶವಾಗಿದ್ದು, ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.

ಆಸಕ್ತರು ಜೂ.10ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಚಂದ್ರಶೇಖರ್ (9740976850) ಲೋಕೇಶ್ ಬಾಬು (9916892343) ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: